ವಾಸಿಂ ಅಕ್ರಂ ‘ಸಿಕ್ಸರ್ ವಿಶ್ವ ದಾಖಲೆ’ ಮುರಿದ ರೋಹಿತ್ ಶರ್ಮಾ

Update: 2019-10-06 12:32 GMT

ವಿಶಾಖಪಟ್ಟಣ, ಅ.5: ಬಲಗೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಟೆಸ್ಟ್ ಪಂದ್ಯವೊಂದರಲ್ಲಿ ಒಟ್ಟು 13 ಸಿಕ್ಸರ್‌ಗಳನ್ನು ಸಿಡಿಸಿ ಪಾಕಿಸ್ತಾನದ ವಾಸಿಂ ಅಕ್ರಂ ದಾಖಲೆ ಮುರಿದರು.

ರೋಹಿತ್ ಮೊದಲ ಇನಿಂಗ್ಸ್‌ನಲ್ಲಿ ಆರು ಬಾರಿ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 7 ಬಾರಿ ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅಕ್ರಂ 1996ರಲ್ಲಿ ಝಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ 12 ಸಿಕ್ಸರ್‌ಗಳನ್ನು ಸಿಡಿಸಿದ್ದರು.

ಸಿಧು ಅವರ 25 ವರ್ಷಗಳ ಹಳೆಯ ದಾಖಲೆ ಮುರಿದ ರೋಹಿತ್

ರೋಹಿತ್ ಶರ್ಮಾ ಭಾರತದ ಪರ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್‌ಗಳನ್ನು ಸಿಡಿಸುವುದರೊಂದಿಗೆ ನವಜೋತ್ ಸಿಂಗ್ ಸಿಧು ಅವರ ದಾಖಲೆಯನ್ನೂ ಮುರಿದರು.

ಭಾರತ-ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್‌ನ 4ನೇ ದಿನದಾಟದಲ್ಲಿ ರೋಹಿತ್ ಈ ಸಾಧನೆ ಮಾಡಿದರು. ಒಟ್ಟು 13 ಸಿಕ್ಸರ್‌ಗಳನ್ನು ಸಿಡಿಸಿದ 32ರ ಹರೆಯದ ರೋಹಿತ್, 25 ವರ್ಷಗಳ ಹಿಂದೆ ಲಕ್ನೋದಲ್ಲಿ ಶ್ರೀಲಂಕಾ ವಿರುದ್ಧ 8 ಸಿಕ್ಸರ್‌ಗಳನ್ನು ಸಿಡಿಸಿದ್ದ ಸಿಧು ದಾಖಲೆಯೊಂದನ್ನು ಮುರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News