ಬಾಂಗ್ಲಾದೇಶ ಜೊತೆ ಮೂರು ಯೋಜನೆಗಳಿಗೆ ಸಹಿ ಹಾಕಿದ ಪ್ರಧಾನಿ ಮೋದಿ

Update: 2019-10-05 16:28 GMT

ಹೊಸದಿಲ್ಲಿ, ಅ.5: ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಶನಿವಾರ ರಕ್ಷಣೆ, ವ್ಯಾಪಾರ ಮತ್ತು ಸಂಪರ್ಕ ಸೇರಿದಂತೆ ಬಾಂಗ್ಲಾದೇಶದ ಜೊತೆ ಮೂರು ಯೋಜನೆಗಳಿಗೆ ಸಹಿ ಹಾಕಿದ್ದಾರೆ.

 ಎರಡು ದೇಶಗಳ ಉದ್ದೇಶ ತಮ್ಮ ಜನರ ಜೀವನವನ್ನು ಉತ್ತಮಗೊಳಿಸುವುದು ಮತ್ತು ಅದೇ ನಮ್ಮ ಸ್ನೇಹಕ್ಕೆ ಆಧಾರವಾಗಿದೆ ಎಂದು ತಿಳಿಸಿದ ಪ್ರಧಾನಿ ಮೋದಿ, ಗಡಿಯಾಚೆಗೆ ಈಶಾನ್ಯ ಭಾಗಕ್ಕೆ ಎಲ್‌ಪಿಜಿ ಪೂರೈಕೆ ಸೇರಿದಂತೆ ಶೇಕ್ ಹಸೀನಾ ಜೊತೆ ಮೂರು ಯೋಜನೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಕಳೆದ ಒಂದು ವರ್ಷದಲ್ಲಿ ನಾವೊ ಜೊತೆಯಾಗಿ 12 ಯೋಜನೆಗಳಿಗೆ ಚಾಲನೆ ನೀಡಿದ್ದೇವೆ.

 ಬಾಂಗ್ಲಾದೇಶದಿಂದ ಎಲ್‌ಪಿಜಿ ಖರೀದಿ ಎರಡು ದೇಶಗಳಿಗೂ ಲಾಭದಾಯಕವಾಗಿದೆ. ಇದರಿಂದ ಭಾರತಕ್ಕೆ ಅನಿಲ ದೊರೆತರೆ ಬಾಂಗ್ಲಾದೇಶದ ಜನರಿಗೆ ಉದ್ಯೋಗ ಲಭಿಸುತ್ತದೆ ಎಂದು ತಿಳಿಸಿದ್ದಾರೆ. ಸಾರಿಗೆ, ಸಂಪರ್ಕ, ಸಾಮರ್ಥ್ಯ ನಿರ್ಮಾಣ ಮತ್ತು ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ, ಕರಾವಳಿ ವಿಚಕ್ಷಣ ವ್ಯವಸ್ಥೆ ಒದಗಿಸುವಿಕೆಯ ಒಪ್ಪಂದ ಸೇರಿದಂತೆ ಒಟ್ಟು ಏಳು ದಾಖಲೆಗಳಿಗೆ ಸಹಿ ಹಾಕಲಾಯಿತು. ನಾಲ್ಕು ದಿನ ಭಾರತ ಭೇಟಿಯಲ್ಲಿರುವ ಶೇಕ್ ಹಸೀನಾ ಗುರುವಾರ ಹೊಸದಿಲ್ಲಿಗೆ ಆಗಮಿಸಿದ್ದರು. ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 73ನೇ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಸೆಪ್ಟಂಬರ್ 27ರಂದು ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News