×
Ad

ಕ್ರೆಡಿಟ್ ರೇಟಿಂಗ್ಸ್‌ನಲ್ಲಿ 2 ಹಂತ ಕೆಳಗಿಳಿದ ಪತಂಜಲಿ ಆಯುರ್ವೇದ ಸಂಸ್ಥೆಯ ಶ್ರೇಯಾಂಕ

Update: 2019-10-05 23:53 IST

 ಹೊಸದಿಲ್ಲಿ, ಅ.5: ಭಾರತದ ಕ್ರೆಡಿಟ್ ರೇಟಿಂಗ್ಸ್ ಸಂಸ್ಥೆಯು ಯೋಗ ಗುರು ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ ಲಿ.ನ ಕ್ರೆಡಿಟ್ ರೇಟಿಂಗ್ಸ್ ಅನ್ನು ಎ ಪ್ಲಸ್‌ನಿಂದ ಎ ಮೈನಸ್ ಹಂತಕ್ಕೆ ಇಳಿಸಿದೆ ಎಂದು ವರದಿಯಾಗಿದೆ.

ಪತಂಜಲಿ ಆಯುರ್ವೇದ ಸಂಸ್ಥೆಯ ಅಂಗಸಂಸ್ಥೆ ಪತಂಜಲಿ ಕನ್ಸಾರ್ಟಿಯಂ ಅಧಿಗ್ರಹಣ ಪ್ರೈ.ಲಿ. ಸಂಸ್ಥೆಯು ರುಚಿ ಸೋಯಾ ಇಂಡಸ್ಟ್ರೀಸ್ ಅನ್ನು 43.5 ಬಿಲಿಯನ್ ರೂಪಾಯಿ ಮೊತ್ತದಲ್ಲಿ ವಶಕ್ಕೆ ಪಡೆದುಕೊಂಡಿದೆ. ಇದಕ್ಕಾಗಿ ಪತಂಜಲಿ ಆಯುರ್ವೇದ ಲಿ.ನಿಂದ ಭಾರೀ ಮೊತ್ತದ ಹಣವನ್ನು ಪತಂಜಲಿ ಕನ್ಸಾರ್ಟಿಯಂಗೆ ವರ್ಗಾಯಿಸಲಾಗಿದೆ.

 ಇದರಿಂದ ಪತಂಜಲಿ ಆಯುರ್ವೇದ ಸಂಸ್ಥೆಯ ಆರ್ಥಿಕ ಅಪಾಯದ ರೂಪುರೇಶೆ ದುರ್ಬಲಗೊಳ್ಳುವ ನಿರೀಕ್ಷೆಯಿದೆ. ಆದ್ದರಿಂದ ಪತಂಜಲಿ ಆಯುರ್ವೇದ ಸಂಸ್ಥೆಯ ಕ್ರೆಡಿಟ್ ರೇಟಿಂಗ್ಸ್ 2 ಹಂತ ಕೆಳಗಿಳಿದಿದೆ ಎಂದು ‘ಕೇರ್ ಆ್ಯಂಡ್ ಬ್ರಿಕ್‌ವರ್ಕ್ ರೇಟಿಂಗ್ಸ್’ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News