ಇಂಧನ ಖಾಲಿಯಾಗಿ ಅರ್ಧ ದಾರಿಯಲ್ಲಿ ನಿಂತ ಆ್ಯಂಬುಲೆನ್ಸ್: ಗರ್ಭಿಣಿ ಮೃತ್ಯು

Update: 2019-10-06 09:04 GMT
ಸಾಂದರ್ಭಿಕ ಚಿತ್ರ

ಮಯೂರ್‍ ಬಂಜ್, ಅ.6: ಆಸ್ಪತ್ರೆಗೆ ಒಯ್ಯುತ್ತಿದ್ದ ಆ್ಯಂಬುಲೆನ್ಸ್ ನ ಇಂಧನ ಖಾಲಿಯಾಗಿ ವಾಹನ ಅರ್ಧ ದಾರಿಯಲ್ಲೇ ನಿಂತ ಪರಿಣಾಮ ಗರ್ಭಿಣಿಯೊಬ್ಬರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಕುಲಿಯಾನ ಬಳಿ ಈ ಘಟನೆ ನಡೆದಿದೆ.

ಆರಂಭದಲ್ಲಿ ಗರ್ಭಿಣಿಯನ್ನು ಬಂಗಿರಿಪೋಶಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬಾರಿಪಾದದಲ್ಲಿರುವ ಪಂಡಿತ್ ರಘುನಾಥ್ ಮುರ್ಮು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಮತ್ತೊಂದು ಆ್ಯಂಬುಲೆನ್ಸ್ ವಾಹನದ ಮೂಲಕ ಆಸ್ಪತ್ರೆಗೆ ಮಹಿಳೆಯನ್ನು ಕೊಂಡೊಯ್ದಾಗ, ಆಕೆ ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದರು.

"ವಾಹನದಲ್ಲಿ ಸಾಕಷ್ಟು ಇಂಧನ ಇತ್ತು. ಆದರೆ ಆಯಿಲ್ ಪೈಪ್ ಸಿಡಿದ ಕಾರಣದಿಂದ ಇಂಧನ ಸೋರಿಕೆಯಾಗಿದೆ. ರೋಗಿ ಕೂಡಾ ಚಿಂತಾಜನಕ ಸ್ಥಿತಿಯಲ್ಲಿದ್ದರು. ತನಿಖೆ ನಡೆಯುತ್ತಿದೆ. ಈ ಘಟನೆ ಬೇಸರ ತಂದಿದೆ. ಬಂಗಾರಿಪೋಷ್ ಆಸ್ಪತ್ರೆ ವೈದ್ಯರು ಹೇಳಿದಂತೆ, ಇಂಧನ ಪೈಪ್‍ನಲ್ಲಿ ಸಮಸ್ಯೆ ಇತ್ತು ಎಂದು ಚಾಲಕ ಮೊದಲೇ ಹೇಳಿದ್ದ. ಇದು ಬೇಜಾವ್ದಾರಿಯೇ ಅಥವಾ ದುರದೃಷ್ಟಕರ ಘಟನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು" ಎಂದು ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ಡಾ.ಪಿ.ಕೆ.ಮಹಾಪಾತ್ರ ಹೇಳಿದ್ದಾರೆ.

ಮಾರ್ಗಮಧ್ಯದಲ್ಲಿ ಆ್ಯಂಬುಲೆನ್ಸ್ ಕೆಟ್ಟ ಬಳಿಕ ಮತ್ತೊಂದು 108 ವಾಹನಕ್ಕೆ ಕರೆ ಮಾಡಿ ವಾಹನ ತರಿಸಿ ಮಹಿಳೆಯನ್ನು ಆಸ್ಪತ್ರೆಗೆ ಒಯ್ಯಲಾಗಿತ್ತು ಎಂದು ಮಹಾಪಾತ್ರ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News