ವಾಣಿಜ್ಯ ಕ್ಷೇತ್ರಕ್ಕೆ ಹಣಕಾಸಿನ ಹರಿವು ಶೇ.88ರಷ್ಟು ಕುಸಿತ: ಆರ್ ಬಿಐ ವರದಿ

Update: 2019-10-07 07:51 GMT

ಹೊಸದಿಲ್ಲಿ, ಅ.7: ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳುಗಳಲ್ಲಿ ವಾಣಿಜ್ಯ ಕ್ಷೇತ್ರಕ್ಕೆ ಒಟ್ಟಾರೆ ಹಣಕಾಸಿನ ಹರಿವು ಶೇ.88ರಷ್ಟು  ಕುಸಿತ ಕಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಅಂಕಿಅಂಶಗಳ ಪ್ರಕಾರ ಬ್ಯಾಂಕುಗಳು ಹಾಗೂ ಬ್ಯಾಂಕಿಂಗೇತರ ಸಂಸ್ಥೆಗಳಿಂದ ವಾಣಿಜ್ಯ ಕ್ಷೇತ್ರಕ್ಕೆ ಹರಿದು ಬಂದ ಹಣ 2019-2020ರಲ್ಲಿ (ಎಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯ ಭಾಗದವರೆಗೆ) 90,995 ಕೋಟಿ ರೂ. ಆಗಿತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಮೊತ್ತ ರೂ 7,36,087 ಕೋಟಿಯಷ್ಟಾಗಿತ್ತು. ವಾಣಿಜ್ಯ ಕ್ಷೇತ್ರದಲ್ಲಿ ಕೃಷಿ, ಉತ್ಪಾದನಾ ಮತ್ತು ಸಾರಿಗೆ ಕ್ಷೇತ್ರಗಳು ಒಳಗೊಂಡಿಲ್ಲ.

ದೇಶದ ಆರ್ಥಿಕ ರಂಗ ನಿಧಾನಗತಿಯಲ್ಲಿರುವ ಹಿನ್ನೆಲೆಯಲ್ಲಿ ಠೇವಣಿ ಸ್ವೀಕರಿಸದೇ ಇರುವ ಹಾಗೂ ಠೇವಣಿ ಸ್ವೀಕರಿಸುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳತ್ತ ವಾಣಿಜ್ಯ ಕ್ಷೇತ್ರದಿಂದ ರೂ 1,25,600 ಕೋಟಿ ಹಣ ಹೋಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ ರೂ 41,200 ಕೋಟಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News