ಮುರಿದ ಸೇತುವೆ: ನದಿಗೆ ಬಿದ್ದ 4 ಕಾರುಗಳು
Update: 2019-10-07 14:15 IST
ಹೊಸದಿಲ್ಲಿ, ಅ.7: ಭಾರೀ ಮಳೆಯ ಪರಿಣಾಮ ಸೇತುವೆಯೊಂದು ಮುರಿದುಬಿದ್ದು 4 ಕಾರುಗಳು ನದಿಗೆ ಬಿದ್ದ ಘಟನೆ ಗುಜರಾತ್ ನ ಮಲಾಂಕಾ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ.
ಸೇತುವೆಯ ಮಧ್ಯಭಾಗವು ಬಿರುಕು ಬಿಟ್ಟು ಮುರಿದು ಬಿದ್ದಿದೆ. ಘಟನೆಯಿಂದ ಜುನಾಗಡ್ -ಮುಂದ್ರಾ ರಸ್ತೆಯ ಸಂಪರ್ಕ ಕಡಿತಗೊಂಡಿದೆ.