ತಾಲಿಬಾನ್ ಅಪಹರಿಸಿದ್ದ ಭಾರತದ ಮೂವರು ಎಂಜಿನಿಯರ್‌ಗಳ ಬಿಡುಗಡೆ

Update: 2019-10-07 09:53 GMT

ಹೊಸದಿಲ್ಲಿ, ಅ.7: ಕಳೆದ ವರ್ಷ  ತಾಲಿಬಾನ್ ಅಪಹರಿಸಿದ್ದ   ಏಳು ಭಾರತೀಯ ಎಂಜಿನಿಯರ್‌ ಪೈಕಿ ಮೂವರನ್ನು ಬಿಡುಗಡೆ ಮಾಡಿದೆ. 

ಉತ್ತರ ಬಾಗ್ಲಾನ್ ಪ್ರಾಂತ್ಯದಲ್ಲಿನ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು  ಮೇ 2018 ರಲ್ಲಿ ಅಪಹರಿಸಲಾಗಿತ್ತು.  ಒತ್ತೆಯಾಳುಗಳಲ್ಲಿ ಒಬ್ಬನನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಯಿತು ಬಿಡುಗಡೆಯಾದ ಒತ್ತೆಯಾಳುಗಳ ಗುರುತುಗಳನ್ನು ಉಗ್ರಗಾಮಿ ಗುಂಪು ಬಹಿರಂಗಪಡಿಸಿಲ್ಲ.

    ಉಗ್ರಗಾಮಿ ಗುಂಪು ಯಾರೊಂದಿಗೆ ಕೈದಿಗಳನ್ನು ವಿನಿಮಯ ಮಾಡಿಕೊಂಡಿದೆ ಮತ್ತು ಬಿಡುಗಡೆಗೊಂಡ ತಾಲಿಬಾನ್ ಸದಸ್ಯರನ್ನು ಅಫ್ಘಾನಿಸ್ತಾನ  ಅಧಿಕಾರಿಗಳು ಅಥವಾ ಅಫ್ಘಾನಿಸ್ತಾನದಲ್ಲಿ ಯುಎಸ್ ಪಡೆಗಳು ಹಿಡಿದಿಟ್ಟುಕೊಂಡಿದ್ದಾರೆಯೇ ಎಂದು ಹೇಳಲು ತಾಲಿಬಾನ್ ಮುಖಂಡರು ನಿರಾಕರಿಸಿದರು ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಆದರೆ, 11 ಉಗ್ರರನ್ನು ಅಫ್ಘಾನಿಸ್ತಾನದ  ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಆದರೆ ಅದು ಸ್ಥಳವನ್ನು ಬಹಿರಂಗಪಡಿಸಿಲ್ಲ.

ಒತ್ತೆಯಾಳುಗಳಲ್ಲಿ ಒಬ್ಬನನ್ನು ಮಾರ್ಚ್ ನಲ್ಲಿ  ಬಿಡುಗಡೆ ಮಾಡಲಾಯಿತು, ಆದರೆ ಬಿಡುಗಡೆಯಾದ ಒತ್ತೆಯಾಳುಗಳ ಗುರುತುಗಳನ್ನು ಉಗ್ರಗಾಮಿ ಗುಂಪು ಬಹಿರಂಗಪಡಿಸಿಲ್ಲ. ಬಿಡುಗಡೆಯಾದ ತಾಲಿಬಾನ್ ನಾಯಕರಲ್ಲಿ ಶೇಖ್ ಅಬ್ದುರ್ ರಹೀಮ್ ಮತ್ತು ಮಾವ್ಲಾವಿ ಅಬ್ದುರ್ ರಶೀದ್ ಸೇರಿದ್ದಾರೆ, ಅವರು 2001 ರಲ್ಲಿ ಯುಎಸ್ ನೇತೃತ್ವದ ಪಡೆಗಳಿಂದ ಪದಚ್ಯುತಗೊಳ್ಳುವ ಮೊದಲು ತಾಲಿಬಾನ್ ಆಡಳಿತದ ಸಮಯದಲ್ಲಿ ಕ್ರಮವಾಗಿ ಕುನಾರ್ ಮತ್ತು ನಿಮ್ರೋಜ್ ಪ್ರಾಂತ್ಯಗಳ ದಂಗೆಕೋರ ಗುಂಪಿನ ಗವರ್ನರ್‌ಗಳಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News