ಈರುಳ್ಳಿ ಬೆಲೆ ಎರಡು ವಾರಗಳಲ್ಲೇ ಅತ್ಯಧಿಕ

Update: 2019-10-09 17:48 GMT

ಮುಂಬೈ, ಅ. 9: ಈರುಳ್ಳಿ ಬೆಲೆ ಕಳೆದ ಎರಡು ವಾರಗಳಲ್ಲೇ ಬುಧವಾರ ಅತ್ಯಧಿಕ ಏರಿಕೆಯಾಗಿದೆ. ಈ ನಡುವೆ, ಎನ್‌ಸಿಪಿ ನಾಯಕ ಶರದ್ ಪವಾರ್ ಕೃಷಿ ನೀತಿಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವರ್ಷಗಳಲ್ಲಿ ಈ ಬಾರಿ ಈರುಳ್ಳಿ ಪೂರೈಕೆ ಅತಿ ಕಡಿಮೆ 137 ಟನ್‌ಗಳಿಗೆ ಇಳಿಕೆಯಾಗಿರುವುದರಿಂದ ಏಶ್ಯಾದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ಲಾಸಲ್‌ಗಾಂವ್‌ನಲ್ಲಿ ಈರುಳ್ಳಿ ಬೆಲೆ ಅತ್ಯಧಿಕ 37.29ಕ್ಕೆ ಏರಿಕೆಯಾಗಿದೆ. ನೀರುಳ್ಳಿ ಬೆಲೆ ನಿಯಂತ್ರಣ ಹಾಗೂ ರಫ್ತು ನಿಷೇಧ ಆಗ್ರಹಿಸಿ ಆರಂಭವಾಗಿರುವ ಪ್ರತಿಭಟನೆಗೆ ಹಲವು ಸಣ್ಣ ರೈತರ ಗುಂಪುಗಳು ಕೈ ಜೋಡಿಸಿವೆ. ನಾವು ಕೂಡ ಬೆಂಬಲಿಸುತ್ತೇವೆ. ನಾವು ಇವೆರಡನ್ನೂ ಹಿಂದೆ ತೆಗೆಯಬೇಕೆಂದು ಸರಕಾರವನ್ನು ಆಗ್ರಹಿಸುತ್ತೇವೆ ಎಂದು ಸ್ವಾಭಿಮಾನಿ ಶೇತ್ಕಾರಿ ಸಂಘಟನೆಯ ಸ್ಥಳೀಯ ನಾಯಕ ಹಂಸರಾಜ್ ವಾಡ್ಗುಲೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News