ನಟಿ ಆಶ್ರಿತಾ ಶೆಟ್ಟಿ ಜೊತೆ ಕ್ರಿಕೆಟಿಗ ಮನೀಷ್ ಪಾಂಡೆ ವಿವಾಹ?

Update: 2019-10-10 12:05 GMT

ಬೆಂಗಳೂರು, ಅ.10: ಭಾರತೀಯ ಕ್ರಿಕೆಟಿಗ ಮನೀಷ್ ಪಾಂಡೆ ಮುಂಬೈನಲ್ಲಿ ಡಿ.2ರಂದು ತನ್ನ ಜೀವನದ ಎರಡನೇ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ದಾಂಡಿಗ ಪಾಂಡೆ ದಕ್ಷಿಣ ಭಾರತದ ಖ್ಯಾತ ನಟಿ ಆಶ್ರಿತಾ ಶೆಟ್ಟಿಯವರನ್ನು ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.

ಪಾಂಡೆ ಈಗ ನಡೆಯುತ್ತಿರುವ ವಿಜಯ ಹಝಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಪಾಂಡೆ ಅವರ ವಿವಾಹವು ಅವರ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರ ಉಪಸ್ಥಿತಿಯಲ್ಲಿ ಎರಡು ದಿನಗಳ ಕಾಲ ಮುಂಬೈನಲ್ಲಿ ನಡೆಯಲಿದೆ ಎಂದು ‘ಮಿಡ್ ಡೇ’ ದಿನಪತ್ರಿಕೆ ವರದಿ ಮಾಡಿದೆ.

ಅದೇ ಸಮಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಪಂದ್ಯವನ್ನಾಡಲು ಟೀಮ್ ಇಂಡಿಯಾದ ಸದಸ್ಯರು ಮುಂಬೈನಲ್ಲಿರುವ ಕಾರಣ ಪಾಂಡೆ ಅವರ ವಿವಾಹ ಸಮಾರಂಭಕ್ಕೆ ಹಾಜರಾಗುವ ಸಾಧ್ಯತೆಯಿದೆ.

 26ರ ಹರೆಯದ ನಟಿ ಆಶ್ರಿತಾ ಅವರು ಇಂದ್ರಜಿತ್ ಹಾಗೂ ಉದಯಂ ಎನ್‌ಎಚ್ 4 ಚಿತ್ರಗಳಲ್ಲಿ ನಟಿಸಿದ್ದರು.

ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದ ಪಾಂಡೆ ಬಿಗ್ ಹಿಟ್ಟರ್ ಬ್ಯಾಟ್ಸ್ ಮನ್ ಆಗಿದ್ದರೂ ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಪಾಂಡೆ ಈ ತನಕ ಭಾರತದ ಪರ 23 ಏಕದಿನ, 31 ಟಿ-20 ಹಾಗೂ 89 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News