ಪ್ರಧಾನಿ ಮೋದಿ ಸೋದರನ ಪುತ್ರಿಯ ಪರ್ಸ್ ಎಗರಿಸಿದ ದುಷ್ಕರ್ಮಿಗಳು

Update: 2019-10-12 15:05 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಅ.12: ಪ್ರಧಾನಿ ನರೇಂದ್ರ ಮೋದಿಯವರ ಸಹೋದರನ ಪುತ್ರಿಯ ಕೈಯಲ್ಲಿದ್ದ ಪರ್ಸ್ ಅನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತೊಯ್ದ ಘಟನೆ ಉತ್ತರ ದಿಲ್ಲಿಯ ಸಿವಿಲ್ ಲೈನ್ಸ್‌ನಲ್ಲಿ ನಡೆದಿದೆ.

ಸಿವಿಲ್ ಲೈನ್ಸ್‌ನಲ್ಲಿರುವ ಗುಜರಾತಿ ಸಮಾಜ ಭವನದ ಎದುರು ಮೋದಿಯ ಸಹೋದರನ ಪುತ್ರಿ ದಮಯಂತಿ ಬೆನ್ ಮೋದಿ ರಿಕ್ಷಾದಿಂದ ಇಳಿದು ಒಳಗೆ ಹೋಗುತ್ತಿದ್ದಾಗ ಅಲ್ಲಿಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಅವರ ಕೈಯಲ್ಲಿದ್ದ ಪರ್ಸ್ ಎಗರಿಸಿ ಪರಾರಿಯಾಗಿದ್ದಾರೆ. ಪರ್ಸ್‌ನಲ್ಲಿ 56,000 ರೂ. ನಗದು, 2 ಮೊಬೈಲ್ ಹಾಗೂ ದಾಖಲೆ ಪತ್ರಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ.

 ಅಮೃತಸರದಿಂದ ಶನಿವಾರ ಬೆಳಿಗ್ಗೆ ದಿಲ್ಲಿಗೆ ಬಂದಿದ್ದ ದಮಯಂತಿ ಸಂಜೆ ಅಹಮದಾಬಾದ್‌ಗೆ ವಾಪಾಸು ತೆರಳಲಿದ್ದರು. ಅವರು ಗುಜರಾತಿ ಸಮಾಜ ಭವನದಲ್ಲಿ ಕೋಣೆಯನ್ನು ಕಾಯ್ದಿರಿಸಿದ್ದರು. ರೈಲ್ವೇ ಸ್ಟೇಷನ್‌ನಿಂದ ಸಿವಿಲ್ ಲೈನ್ಸ್ ಪ್ರದೇಶದವರೆಗೆ ಅಲ್ಲಲ್ಲಿ ಅಳವಡಿಸಿರುವ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ಡಿಸಿಪಿ(ಉತ್ತರ) ಮೋನಿಕಾ ಭಾರದ್ವಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News