ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮಂಜು ರಾಣಿ

Update: 2019-10-13 09:23 GMT

ಹೊಸದಿಲ್ಲಿ, ಅ.13: ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಾಕ್ಸರ್ ಮಂಜು ರಾಣಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಅವರು ರಷ್ಯಾದ ಎಕಟೆರಿನಾ ಪಲ್ಟ್ಸೆವಾ ವಿರುದ್ಧ ಸೋಲನುಭವಿಸಿದರು.

ಶನಿವಾರ 20ನೆ ವಯಸ್ಸಿಗೆ ಕಾಲಿಟ್ಟ ರಾಣಿ ಈ ಬಾರಿ ಫೈನಲ್ ತಲುಪಿದ ಏಕೈಕ ಬಾಕ್ಸರ್ ಆಗಿದ್ದಾರೆ. 6 ಬಾರಿಯ ಚಾಂಪಿಯನ್ ಮೇರಿ ಕೋಮ್, ಜಮುನಾ ಬೋರೋ ಮತ್ತು ಲೊವ್ಲಿನಾ ಬೊರಗೊಹೈನ್ ಈ ಬಾರಿ ಕಂಚಿನ ಪದಕಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News