ಸಿನೆಮಾ ಜಗತ್ತಿಗೆ ಕಾಲಿಟ್ಟ ಇರ್ಫಾನ್ ಪಠಾಣ್: ಚಿತ್ರದ ನಾಯಕ, ನಿರ್ದೇಶಕ ಯಾರು ಗೊತ್ತಾ?

Update: 2019-10-14 15:47 GMT

ಹೊಸದಿಲ್ಲಿ, ಅ.14: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ತಾನು ಸಿನೆಮಾ ಜಗತ್ತಿಗೆ ಕಾಲಿಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಇರ್ಫಾನ್ ಪಠಾಣ್, "ಹೊಸ ಸವಾಲನ್ನು ಎದುರು ನೋಡುತ್ತಿದ್ದೇನೆ" ಎಂದು ಸಿನೆಮಾಗೆ ಸಂಬಂಧಿಸಿದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಪ್ರಸಿದ್ಧ ತಮಿಳು ನಟ ವಿಕ್ರಮ್ ನಾಯಕ ನಟನಾಗಿರುವ ಸಿನೆಮಾದಲ್ಲಿ ಇರ್ಫಾನ್ ನಟಿಸಲಿದ್ದಾರೆ.

'ಡಿಮಾಂಟೆ ಕಾಲನಿ', 'ಇಮೈಕ್ಕಾ ನೊಡಿಗಳ್' ಚಿತ್ರಗಳ ನಿರ್ದೇಶಕ ಅಜಯ್ ಜ್ಞಾನಮುತ್ತು ಈ ಸಿನೆಮಾದ ನಿರ್ದೇಶಕರಾಗಿದ್ದಾರೆ. ಈ ಚಿತ್ರದಲ್ಲಿ ತನ್ನ ಪಾತ್ರವೇನು ಎನ್ನುವುದನ್ನು ಪಠಾಣ್ ಇನ್ನೂ ಬಹಿರಂಗಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News