ಉ.ಪ್ರದೇಶದಲ್ಲಿ ಗುಂಪು ದಾಳಿ: ವೃದ್ಧ ಮೃತ್ಯು

Update: 2019-10-15 18:05 GMT

ಮಝಪ್ಫರ್‌ನಗರ, ಅ. 15: ಗುಂಪೊಂದು ದಾಳಿ ನಡೆಸಿದ ಪರಿಣಾಮ ಓರ್ವ ವೃದ್ಧ ಸಾವನ್ನಪ್ಪಿ, ಮೂವರು ಮಕ್ಕಳು ಗಾಯಗೊಂಡ ಘಟನೆ ಉತ್ತರಪ್ರದೇಶದ ಮಿರಾನ್‌ಪುರ ಪಟ್ಟಣದಲ್ಲಿ ನಡೆದಿದೆ.

“ನನ್ನ ತಂದೆಯನ್ನು ನಾಲ್ವರು ವ್ಯಕ್ತಿಗಳಿದ್ದ ಗುಂಪು ಥಳಿಸಿ ಹತ್ಯೆಗೈದಿದೆ. ಈ ಘಟನೆಯಲ್ಲಿ ನನ್ನ ಸಹೋದರರು ಗಾಯಗೊಂಡಿದ್ದಾರೆ” ಎಂದು ಹತ್ಯೆಗೀಡಾದ ವೃದ್ಧನ ಪುತ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಡಿ.ಎಸ್. ಖುಶ್ವಾಹ್ ಹೇಳಿದ್ದಾರೆ. ಇನ್ನೊಂದು ಘಟನೆಯಲ್ಲಿ ರವಿವಾರ ನಾಪತ್ತೆಯಾಗಿರುವ 50 ವರ್ಷದ ವ್ಯಕ್ತಿಯ ಮೃತದೇಹ ನರುತ್ತಂಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ಈ ವ್ಯಕ್ತಿಯನ್ನು ಅಮ್ಶಿದ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News