ಜಪಾನ್‌ಗೆ ಶರಣಾದ ಭಾರತ

Update: 2019-10-15 18:47 GMT

ಜೊಹೊರ್ ಬಹ್ರು(ಮಲೇಶ್ಯಾ), ಅ.15: ಸುಲ್ತಾನ್ ಆಫ್ ಜೊಹೊರ್ ಕಪ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತೀಯ ಜೂನಿಯರ್ ಹಾಕಿ ತಂಡ ಜಪಾನ್ ವಿರುದ್ಧ 3-4 ಗೋಲುಗಳ ಅಂತರದಿಂದ ಸೋಲನುಭವಿಸಿದೆ.

ಜಪಾನ್ ಪೆನಾಲ್ಟಿಕಾರ್ನರ್‌ನ ಮೂಲಕ ಆರಂಭದಲ್ಲೇ ಮುನ್ನಡೆ ಸಾಧಿಸಿತು. ವಟರು ಮಟ್ಸುಮೊಟೊ ಜಪಾನ್‌ಗೆ ಮುನ್ನಡೆ ಒದಗಿಸಿದರು. ಮೂರನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಭಾರತದ ಪ್ರತಾಪ್ ಲಾಕ್ರಾ ಅವರ ಪ್ರಯತ್ನವನ್ನು ಜಪಾನ್‌ನ ಟಕುಮಿ ವಿಫಲಗೊಳಿಸಿದರು.

 ಭಾರತ 2ನೇ ಕ್ವಾರ್ಟರ್‌ನಲ್ಲಿ ಹಲವು ಅವಕಾಶ ಸೃಷ್ಟಿಸಿತು. ಆದರೆ, ಜಪಾನ್ ರಕ್ಷಣಾಕೋಟೆ ಬೇಧಿಸಲು ವಿಫಲವಾಯಿತು.ಜಪಾನ್ 22ನೇ ನಿಮಿಷದಲ್ಲಿ 2ನೇ ಗೋಲು ಗಳಿಸಿತು. ಕೋಸಿ ಕವಾಬೆ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದರು. ಮೊದಲಾರ್ಧದಲ್ಲಿ ಜಪಾನ್ 2-0 ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ 2ನೇ ಬಾರಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತ ಇದನ್ನು ಗೋಲಾಗಿ ಪರಿವರ್ತಿಸಿತು. ಕಿಟಾ ವಟನಬೆ ಜಪಾನ್‌ಗೆ ಲಭಿಸಿದ 5ನೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ 3-1 ಮುನ್ನಡೆ ಒದಗಿಸಿದರು. ಕೊಸಿ ಕವಾಬೆ 37ನೇ ನಿಮಿಷದಲ್ಲಿ ಜಪಾನ್‌ನ 4ನೇ ಗೋಲು ಗಳಿಸಿದರು. ಶಾರದಾ ನಂದ ತಿವಾರಿ ಭಾರತದ ಪರ 2ನೇ ಗೋಲು ಗಳಿಸಿದರು.

ಅಂತಿಮ ಕ್ವಾರ್ಟರ್‌ನ 53ನೇ ನಿಮಿಷದಲ್ಲಿ ಪ್ರತಾಪ್ ಲಾಕ್ರಾ ಭಾರತದ ಪರ 3ನೇ ಗೋಲು ಗಳಿಸಿದರು. ಅಂತಿಮವಾಗಿ ಜಪಾನ್ 4-3 ಅಂತರದ ಜಯ ಸಾಧಿಸಿದರು. ಲೀಗ್ ಹಂತದ 3ನೇ ಪಂದ್ಯ ಅ,16ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News