50 ಓವರ್ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ 17 ವರ್ಷದ ಯಶಸ್ವಿ ಜೈಸ್ವಾಲ್: ಹೊಸ ದಾಖಲೆ ನಿರ್ಮಾಣ

Update: 2019-10-16 08:52 GMT

ಹೊಸದಿಲ್ಲಿ, ಅ.16: ಐವತ್ತು ಓವರ್ ಗಳ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರರಾಗಿ ಮುಂಬೈಯ 17 ವರ್ಷದ ಯಶಸ್ವಿ ಜೈಸ್ವಾಲ್ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಜಾರ್ಖಂಡ್ ತಂಡದೆದುರು ನಡೆದ ವಿಜಯ್ ಹಜಾರೆ ಟ್ರೋಫಿಯ ಪಂದ್ಯವೊಂದರಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಇದಕ್ಕೂ ಮೊದಲು ಅವರು ಗೋವಾ ಮತ್ತು ಕರ್ನಾಟಕ ತಂಡಗಳೆದುರು ಶತಕ ಸಿಡಿಸಿ ಮಿಂಚಿದ್ದರು. 149 ಎಸೆತಗಳಲ್ಲಿ 200 ರನ್ ಗಳಿಸಿದ ಜೈಸ್ವಾಲ್ 17 ಬೌಂಡರಿ ಮತ್ತು 12 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.

ಏಕದಿನ ಪಂದ್ಯದಲ್ಲಿ ದ್ವಿಶತನ ಸಿಡಿಸಿದ ಮೂರನೆ ಆಟಗಾರನಾಗಿ ಜೈಸ್ವಾಲ್ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಕೆ.ವಿ. ಕೌಶಲ್ ಮತ್ತು ಸಂಜು ಸ್ಯಾಮ್ಸನ್ ಈ ಸಾಧನೆ ಮಾಡಿದ್ದರು. 154 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 203 ರನ್ ಗಳಿಸಿ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News