ಮೃತ ರೋಗಿಯ ಕಣ್ಣುಗಳಿಗೆ ಮುತ್ತಿಗೆ ಹಾಕಿದ ಇರುವೆಗಳು: ಐವರು ವೈದ್ಯರ ಅಮಾನತು

Update: 2019-10-16 14:41 GMT

ಭೋಪಾಲ್, ಅ.16: ಮಧ್ಯ ಪ್ರದೇಶದ ಶಿವಪುರಿ ಎಂಬಲ್ಲಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯೊಬ್ಬರ ಕಣ್ಣುಗಳಲ್ಲಿ ಇರುವೆಗಳು  ಹರಿದಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ಸರ್ಜನ್ ಸಹಿತ ಐದು ಮಂದಿ ವೈದ್ಯರನ್ನು ಸೇವೆಯಿಂದ  ಅಮಾನತುಗೊಳಿಸಲಾಗಿದೆ. ಘಟನೆಯ ತನಿಖೆಗೆ ಮುಖ್ಯಮಂತ್ರಿ ಕಮಲ್ ನಾಥ್ ಆದೇಶಿಸಿದ್ದಾರೆ.

ಐವತ್ತು ವರ್ಷದ ಕ್ಷಯರೋಗಿ ಬಾಲಚಂದ್ರ ಲೋಧಿ ಎಂಬವರು ಆಸ್ಪತ್ರೆಗೆ ದಾಖಲಾಗಿ ಐದು ಗಂಟೆಗಳೊಳಗೆ ಮೃತಪಟ್ಟಿದ್ದರು. ಇದನ್ನು ಗಮನಿಸಿದ ಆಸ್ಪತ್ರೆಯ ಇತರ ರೋಗಿಗಳು ವೈದ್ಯರ ಗಮನಕ್ಕೆ ಈ ವಿಚಾರ ತಂದರೂ ಅಲ್ಲಿಂದ ಮೃತದೇಹವನ್ನು ಕೊಂಡುಹೋಗುವ ಏರ್ಪಾಟನ್ನು ಯಾರೂ ಮಾಡಿರಲಿಲ್ಲ.

ವೈದ್ಯರು ರೋಗಿಯನ್ನು ಮುಟ್ಟದೆಯೇ ಆತ ಮೃತಪಟ್ಟಿದ್ದಾನೆಂದು ಘೋಷಿಸಿದ್ದರು ಹಾಗೂ ಕರ್ತವ್ಯದಲ್ಲಿದ್ದ ವೈದ್ಯರೂ ಮೃತನ ಕಣ್ಣುಗಳಲ್ಲಿ ಹರಿದಾಡುತ್ತಿದ್ದ ಇರುವೆಗಳನ್ನು ತೆಗೆಯುವ ಯತ್ನ ನಡೆಸಿಲ್ಲ. ಮೃತನ ಪತ್ನಿ ರಾಮಶ್ರೀ ಲೋಧಿ ಪತಿಯ ಕಣ್ಣುಗಳಲ್ಲಿ ಹರಿದಾಡುತ್ತಿದ್ದ ಇರುವೆಗಳನ್ನು ತೆಗೆಯಲು ಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News