ಮಾಜಿ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಲಿ ಕ್ಸುರುಯಿ ನಿವೃತ್ತಿ

Update: 2019-10-18 05:03 GMT

ಹೊಸದಿಲ್ಲಿ, ಅ.17: ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಲಿ ಕ್ಸುರುಯಿ ಗುರುವಾರ ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್‌ನಿಂದ ನಿವೃತ್ತಿಯಾಗಿದ್ದಾರೆಂದು ಬಿಡಬ್ಲುಎಫ್ ತಿಳಿಸಿದೆ.

28ರ ಹರೆಯದ ಚೀನಾದ ಆಟಗಾರ್ತಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ರಿಯೋ ಒಲಿಂಪಿಕ್ಸ್‌ನ ವೇಳೆ ಗಾಯಗೊಳ್ಳುವ ಮೊದಲು ಅತ್ಯಂತ ಬಲಿಷ್ಠ ಆಟಗಾರ್ತಿಯಾಗಿ ಮಿಂಚಿದ್ದರು.

ಭಾರತದ ಆಟಗಾರ್ತಿ ಸೈನಾ ನೆಹ್ವಾಲ್‌ರನ್ನು ಮಣಿಸುವ ಮೂಲಕ ಬೆಳಕಿಗೆ ಬಂದ ಲಿ 2010ರಲ್ಲಿ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಪ್ರಮುಖ ಪ್ರಶಸ್ತಿ ಜಯಿಸಿದರು. 2012ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಜಯಿಸಿದ ಲೀ 2013 ಹಾಗೂ 2014ರ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಥಾಯ್ಲೆಂಡ್‌ನ ರಚನೊಕ್ ಹಾಗೂ ಸ್ಪೇನ್‌ನ ಮರಿನ್‌ಗೆ ಶರಣಾಗಿ ಬೆಳ್ಳಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News