ವಿಧಾನ ಸಭೆ ಸ್ಪೀಕರ್‌ಗೆ 6 ತಿಂಗಳು ಜೈಲು ಶಿಕ್ಷೆ: ಕಾರಣವೇನು ಗೊತ್ತಾ ?

Update: 2019-10-18 17:23 GMT

ಹೊಸದಿಲ್ಲಿ, ಅ. 18: ಪೂರ್ವ ದಿಲ್ಲಿಯ ಕಾಲನಿಯೊಂದರಲ್ಲಿ 2015ರಲ್ಲಿ ಬಿಲ್ಡರ್ ಓರ್ವನ ಮನೆಗೆ ನುಗ್ಗಿ ಗಲಭೆ ನಡೆಸಿದ ಹಾಗೂ ಹಾನಿ ಉಂಟು ಮಾಡಿದ ಪ್ರಕರಣದಲ್ಲಿ ದಿಲ್ಲಿಯ ವಿಧಾನ ಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್‌ಗೆ ರೋಸ್ ಅವೆನ್ಯೂ ನ್ಯಾಯಾಲಯ ಶುಕ್ರವಾರ ಆರು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಈ ಪ್ರಕರಣದಲ್ಲಿ ಗೋಯಲ್ ಅಲ್ಲದೆ, ಇತರ ನಾಲ್ಕು ಮಂದಿ ಕೂಡ ದೋಷಿ ಎಂದು ಪರಿಗಣಿಸಲಾಗಿದೆ. ಎಲ್ಲರಿಗೂ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಈ ಶಿಕ್ಷೆಯಿಂದ ರಾಮ್ ನಿವಾಸ್ ಗೋಯಲ್ ಅವರ ದಿಲ್ಲಿ ವಿಧಾನ ಸಭೆಯ ಸದಸ್ಯತ್ವ ಅನರ್ಹಗೊಳ್ಳುವುದಿಲ್ಲ. ಯಾಕೆಂದರೆ, 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಕ್ಷೆಗೆ ಒಳಗಾದರೆ ಮಾತ್ರ ಚುನಾಯಿತ ಪ್ರತಿನಿಧಿಗಳ ಸದಸ್ಯತ್ವ ಅನರ್ಹಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News