ಇನ್ನೋರ್ವ ಪಿಎಂಸಿ ಬ್ಯಾಂಕ್ ಠೇವಣಿದಾರ ಮೃತ್ಯು

Update: 2019-10-19 16:09 GMT

ಮುಂಬೈ, ಅ.19: ಬಿಕ್ಕಟ್ಟಿನಲ್ಲಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದ ಹಿರಿಯ ನಾಗರಿಕರೋರ್ವರು ಶನಿವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಪಿಎಂಸಿ ಬ್ಯಾಂಕ್ ಹಗರಣ ಬೆಳಕಿಗೆ ಬಂದ ನಂತರ ಮೃತ ಗ್ರಾಹಕರ ಸಂಖ್ಯೆ ಐದಕ್ಕೇರಿದೆ.

ಇಲ್ಲಿಯ ಮುಲುಂಡ್ ನಿವಾಸಿ ರಾಮ ಅರೋರಾ ಮೃತ ವ್ಯಕ್ತಿ. ಅವರದು ಸಹಜ ಸಾವು,ಅವರಿಗೆ ವಯಸ್ಸಾಗಿತ್ತು. ಅವರ ಸಾವಿಗೂ ಬ್ಯಾಂಕ್ ಹಗರಣಕ್ಕೂ ಸಂಬಂಧವಿಲ್ಲ. ಅವರು ಪಿಎಂಸಿ ಬ್ಯಾಂಕಿನಲ್ಲಿರುವ ತನ್ನ ಹಣದ ಮೇಲೆಯೇ ಅವಲಂಬಿತರಾಗಿರಲಿಲ್ಲ ಎಂದು ಅರೋರಾರ ಸಂಬಂಧಿ ಯೋರ್ವರು ಸ್ಪಷ್ಟಪಡಿಸಿದ್ದಾರೆ.

ಪಿಎಂಸಿ ಬ್ಯಾಂಕಿನ ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯುವುದರ ಮೇಲೆ ಆರ್‌ಬಿಐ ನಿರ್ಬಂಧಗಳನ್ನು ಹೇರಿರುವುದರಿಂದ ಬ್ಯಾಂಕಿನ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳವಾರವಷ್ಟೇ ಈ ಬ್ಯಾಂಕಿನಲ್ಲಿ 80 ಲ.ರೂ.ಠೇವಣಿ ಹೊಂದಿರುವ ಮುಲುಂಡ್ ನಿವಾಸಿಯೇ ಆದ ಮುರಳೀಧರ ಧಾರಾ(83) ಎನ್ನುವವರು ಹೃದಯದ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲಾಗದೆ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಇಬ್ಬರು ಗ್ರಾಹಕರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ,ಓರ್ವ ಮಹಿಳಾ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News