ರಾಜಕಾರಣಿಯ ಪುತ್ರನನ್ನು ಮದುವೆಯಾಗುವಂತೆ ತಂದೆಯಿಂದ ಕಿರುಕುಳ: ಬಿಜೆಪಿ ನಾಯಕನ ಪುತ್ರಿಯ ಆರೋಪ

Update: 2019-10-20 15:16 GMT

ಭೋಪಾಲ, ಅ. 20: ರಾಜಕಾರಣಿಯ ಪುತ್ರನೋರ್ವನನ್ನು ವಿವಾಹವಾಗುವಂತೆ ಬಲವಂತಪಡಿಸುತ್ತಿರುವ ಹಾಗೂ ಕಿರುಕುಳ ನೀಡುತ್ತಿರುವ ತನ್ನ ತಂದೆಯಿಂದ ರಕ್ಷಣೆ ನೀಡುವಂತೆ ಕೋರಿ ಮಧ್ಯಪ್ರದೇಶದ ಬಿಜೆಪಿಯ ಮಾಜಿ ಶಾಸಕನ 28 ವರ್ಷದ ಪುತ್ರಿಯೋರ್ವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

 “ನನ್ನ ಪುತ್ರಿ ನಾಪತ್ತೆಯಾಗಿದ್ದಾಳೆ” ಎಂದು ಮಾಜಿ ಬಿಜೆಪಿ ಶಾಸಕ ಸುರೇಂದ್ರ ನಾಥ್ ಸಿಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಎರಡು ದಿನಗಳ ಬಳಿಕ ಶನಿವಾರ ಸಿಂಗ್ ಅವರ ಪುತ್ರಿ ಭಾರ್ತಿ ಸಿಂಗ್ ಅವರ ಮನವಿ ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂತು.

“ನಾನು ಮಾನಸಿಕ ಅಸ್ವಸ್ಥೆ ಎಂದು ಸಾಬೀತುಪಡಿಸಲು ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ನಕಲಿ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ” ಎಂದು ವೀಡಿಯೋ ಒಂದರಲ್ಲಿ ಭಾರ್ತಿ ಸಿಂಗ್ ಆರೋಪಿಸಿದ್ದಾರೆ.

“ನಾನು ಯಾವುದೇ ಮುಸ್ಲಿಂ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಇತರ ಜಾತಿಯ ಯುವಕನೊಂದಿಗೆ ಇಲ್ಲ. ನಾನು ನನ್ನ ಇಚ್ಛೆಯಂತೆ ಮನೆ ತ್ಯಜಿಸಿದೆ. ಇದು ಜಾತಿ ವಿವಾದವಾಗಿ ಬದಲಾಗಬಾರದು. ನಾನು ಶಾಂತಿಯಿಂದ ಬದುಕಲು ಬಯಸುತ್ತೇನೆ” ಎಂದು 56 ಸೆಕೆಂಡ್‌ಗಳ ವೀಡಿಯೊದಲ್ಲಿ ಭಾರ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News