ಕಮಲೇಶ್ ತಿವಾರಿ ಹತ್ಯೆ ಪ್ರಕರಣ: ಆರೋಪಿಗಳು ಧರಿಸಿದ್ದ ಬಟ್ಟೆಗೂ ಪತ್ತೆಯಾದ ಬಟ್ಟೆಗೂ ಹೋಲಿಕೆ

Update: 2019-10-20 18:28 GMT

 ಹೊಸದಿಲ್ಲಿ, ಅ. 20: ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಧರಿಸಿದ್ದ ಬಟ್ಟೆಗೆ ಹೋಲಿಕೆಯಾಗುವ ಬಟ್ಟೆಯನ್ನು ಪೊಲೀಸರು ರವಿವಾರ ವಶಪಡಿಸಿಕೊಂಡಿದ್ದಾರೆ.

ತಿವಾರಿ ನಿವಾಸದ ಸಮೀಪ ಇರುವ ಹೊಟೇಲೊಂದರಲ್ಲಿ ಈ ಬಟ್ಟೆಗಳು ಹಾಗೂ ಕೆಲವು ಚೀಲಗಳು ಪತ್ತೆಯಾಗಿವೆ.

 ತಿವಾರಿ ಅವರನ್ನು ಹತ್ಯೆಗೈಯುವ ಮುನ್ನ ಹಂತಕರು ಆ ಹೊಟೇಲ್‌ನಲ್ಲಿ ನೆಲೆಸಿದ್ದರು. ಹತ್ಯೆ ನಡೆಸಿದ ಬಳಿಕ ಮತ್ತೆ ಆಗಮಿಸಿ ಬಟ್ಟೆಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

  ಹಂತಕರು ಗುರುವಾರ ರಾತ್ರಿ ಹೊಟೇಲ್ ಕೊಠಡಿಗೆ ಆಗಮಿಸಿರುವುದು ಹಾಗೂ ಶುಕ್ರವಾರ ಬೆಳಗ್ಗೆ ಕೊಠಡಿಯಿಂದ ನಿರ್ಗಮಿಸಿರುವುದು ಹೊಟೇಲ್‌ನ ಭದ್ರತಾ ಕ್ಯಾಮೆರಾದಲ್ಲಿ ದಾಖಲಾಗಿದೆ. ಅವರು ಕುರ್ತಾ ಧರಿಸಿರುವುದು ಹಾಗೂ ಗುಜರಾತ್‌ನ ಸೂರತ್‌ನಿಂದ ಖರೀದಿಸಲಾದ ಸಿಹಿ ತಿಂಡಿ ಎಂದು ಹೇಳಬಹುದಾದ ಬಾಕ್ಸ್ ಅನ್ನು ಹೊಂದಿರುವ ಹಳದಿ ಬ್ಯಾಗ್ ಹಿಡಿದುಕೊಂಡಿರುವುದು ದಾಖಲಾಗಿದೆ.

ಪ್ರಕರಣದ ಬಗ್ಗೆ ಇನ್ನಷ್ಟು ಸುಳಿವು ಹಾಗೂ ಪುರಾವೆಗಳನ್ನು ಸಂಗ್ರಹಿಸಲು ಗುಜರಾತ್, ಮಹಾರಾಷ್ಟ್ರ ಎಟಿಎಸ್ ಅನ್ನು ರಾಜ್ಯ ಸರಕಾರ ಸಂಪರ್ಕಿಸಿದೆ ಎಂದು ಉತ್ತರಪ್ರದೇಶ ಪೊಲೀಸ್‌ನ ಪ್ರಧಾನ ನಿರ್ದೇಶಕ ಒ.ಪಿ. ಸಿಂಗ್ ಶನಿವಾರ ರಾತ್ರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News