ವಿಶ್ವಸಂಸ್ಥೆಯ ‘ಫೀಡ್ ಅವರ್ ಫ್ಯೂಚರ್’ ಸಿನಿಮಾ ಜಾಹೀರಾತು ಅಭಿಯಾನ ಶುರು

Update: 2019-10-21 15:41 GMT

ಮುಂಬೈ,ಅ.21: ಭಾರತದಲ್ಲಿ ಹಸಿವು ಮತ್ತು ಕುಪೋಷಣೆಯ ಕುರಿತು ಅರಿವನ್ನು ಹೆಚ್ಚಿಸಲು ಮತ್ತು ಅವುಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ‘ಫೀಡ್ ಅವರ್ ಫ್ಯೂಚರ್(ನಮ್ಮ ಭವಿಷ್ಯಕ್ಕೆ ಉಣ್ಣಿಸಿ)’ಸಿನಿಮಾ ಜಾಹೀರಾತು ಅಭಿಯಾನ ಕ್ಕೆ ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ(ಡಬ್ಲ್ಯುಎಫ್‌ಪಿ)ಯು ಸೋಮವಾರ ಇಲ್ಲಿ ಚಾಲನೆ ನೀಡಿತು.

ಈ ಸಂದರ್ಭದಲ್ಲಿ ಗುಂಪು ಚರ್ಚೆಯೊಂದನ್ನು ಆಯೋಜಿಸಲಾಗಿದ್ದು,ನಟಿ-ನಿರ್ದೇಶಕಿ ನಂದಿತಾ ದಾಸ್ ಹಾಗೂ ಚಿತೃನಿರ್ಮಾತೃಗಳಾದ ನೀರಜ ಘಯವಾನ್ ಮತ್ತು ಅನುಭವ ಸಿನ್ಹಾ ಅವರು ಸಿನಿಮಾ ಹಾಗೂ ಸಾಮಾಜಿಕ ಬದಲಾವಣೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

 ಸಿನಿಮಾ ಸಂವಹನ ಮಾಧ್ಯಮವಾಗಿದ್ದು,ಅದನ್ನು ಎಲ್ಲ ಕೆಲಸಗಳಿಗೂ ಬಳಸಿಕೊಳ್ಳಬಹುದು.ಅದನ್ನು ಮಾಹಿತಿಗಾಗಿ, ಪ್ರಚಾರಕ್ಕಾಗಿ,ಜನರಲ್ಲಿ ಸಂಚಲನ ಮೂಡಿಸಲು ಬಳಸಿಕೊಳ್ಳಬಹುದು. ಆದರೆ ಸಿನಿಮಾವೊಂದು ಏನನ್ನೇ ಹೇಳಲಿ,ಅದು ಜನರ ಉಪಪ್ರಜ್ಞೆಗೆ ಇಳಿಯುತ್ತದೆ ಮತ್ತು ಅವರು ವಿಷಯಗಳೊಳಿಗೆ ಸ್ಪಂದಿಸುವುದರ ಮೇಲೆ ಅತ್ಯಂತ ನಿಧಾನವಾಗಿ ಪರಿಣಾಮವನನ್ನು ಬೀರುತ್ತದೆ ಎಂದು ದಾಸ್ ಹೇಳಿದರೆ,ಇಂತಹ ಜಾಹೀರಾತುಗಳು ಸಿನಿಮಾ ವೀಕ್ಷಕರ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಂತಿರಬೇಕು ಎಂದು ನೀರಜ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News