ಮಹಾರಾಷ್ಟ್ರ, ಹರ್ಯಾಣದಲ್ಲಿ ಶಾಂತಿಯುತ, ಆದರೆ ಕಡಿಮೆ ಮತದಾನ

Update: 2019-10-21 18:17 GMT

  ಹೊಸದಿಲ್ಲಿ,ಅ.21: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯು ಸೋಮವಾರ ಶಾಂತಿಯುತವಾಗಿ ನಡೆದಿದೆ. 2014ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತಗಟ್ಟೆಗೆ ಭೇಟಿ ನೀಡಿದ್ದ ಮತದಾರರ ಸಂಖ್ಯೆ ಕಡಿಮೆಯಾಗಿತ್ತು.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಅನುಕ್ರಮವಾಗಿ ಶೇ.60.5 ಮತ್ತು ಶೇ.65ರಷ್ಟು ಮತದಾನ ನಡೆದಿದೆ ಎಂದು ಉಪ ಚುನಾವಣಾ ಆಯುಕ್ತರಾದ ಭೂಷಣ ಮತ್ತು ಸಂದೀಪ ಸಕ್ಸೇನಾ ಅವರು ದಿಲ್ಲಿಯ ಚುನಾವಣಾ ಆಯೋಗದ ಕೇಂದ್ರಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2014ರ ಚುನಾವಣೆಯಲ್ಲಿ ಇವೆರಡೂ ರಾಜ್ಯಗಳಲ್ಲಿ ಮತದಾನದ ಪ್ರಮಾಣ ಅನುಕ್ರಮವಾಗಿ ಶೇ.63.08 ಮತ್ತು ಶೇ.76.54 ಆಗಿತ್ತು ಎಂದರು. ಅಂತಿಮ ಅಂಕಿಅಂಶಗಳು ಇನ್ನಷ್ಟೇ ಬರಬೇಕಿದ್ದು,ಸೋಮವಾರದ ಮತದಾನದ ಪ್ರಮಾಣ ಇನ್ನಷ್ಟು ಹೆಚ್ಚಾಗಬಹದು ಎಂದು ಅವರು ತಿಳಿಸಿದರು.

ಎರಡು ರಾಜ್ಯ ಚುನಾವಣೆಗಳು ಹಾಗೂ ದೇಶಾದ್ಯಂತ 51 ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳು ಕೆಲವು ವಿರಳ ಘಟನೆಗಳನ್ನು ಹೊರತುಪಡಿಸಿದರೆ ಶಾಂತಿಯುತವಾಗಿದ್ದವು ಎಂದು ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ ಸಿನ್ಹಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News