73 ವಯಸ್ಸಿನ ಮಹಿಳೆಯ ಬಲಿ ಪಡೆದ ಪಿಎಂಸಿ ಬ್ಯಾಂಕ್ ಹಗರಣ

Update: 2019-10-22 10:02 GMT

ಮುಂಬೈ,ಅ.22: ಪಂಜಾಬ್ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣದಲ್ಲಿ 73 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಮೃತ ಮಹಿಳೆಯರ ಪುತ್ರಿ ಹಾಗೂ ಅಳಿಯ ಪಿಸಿಬಿ ಬ್ಯಾಂಕ್‌ನಲ್ಲಿ ಭಾರೀ ಪ್ರಮಾಣದಲ್ಲಿ ಠೇವಣಿ ಇಟ್ಟಿದ್ದರು. ಬ್ಯಾಂಕ್ ಹಗರಣದಿಂದ ನೊಂದಿದ್ದ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಭಾರತಿ ಸದರಂಗಾನಿ ಎಂಬ ಮಹಿಳೆ ರವಿವಾರ ಮಧ್ಯಾಹ್ನ 2 ಗಂಟೆಗೆ ಹೃದಯಾಘಾತವಾಗಿತ್ತು. ಪಿಸಿಬಿ ಬ್ಯಾಂಕ್‌ನಲ್ಲಿ 2.5 ಕೋ.ರೂ. ಠೇವಣಿ ಇಟ್ಟಿದ್ದ ತನ್ನ ಪುತ್ರಿ ಹಾಗೂ ಅಳಿಯನ ಭವಿಷ್ಯದ ಬಗ್ಗೆ ಭಾರತಿ ತೀವ್ರ ಚಿಂತಿತರಾಗಿದ್ದರು.

‘‘ಭಾರತಿ ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ. ಬ್ಯಾಂಕ್ ಹಗರಣದಿಂದ ನೊಂದಿರುವ ಅವರು ತೀವ್ರ ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ. ನನ್ನ ಪತ್ನಿ ಹೇಮಾ ಫೋನ್ ಮುಖಾಂತರ ತನ್ನ ಸಮಸ್ಯೆಯನ್ನು ಹಂಚಿಕೊಳ್ಳುತ್ತಿದ್ದಳು. ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದರು’’ ಎಂದು ಮೃತ ಮಹಿಳೆಯ ಅಳಿಯ ಚಂದನ್ ಚೋಟಾನಿ ಹೇಳಿದ್ದಾರೆ.

ಪಿಎಂಸಿ ಬ್ಯಾಂಕ್ ಹಗರಣ ಬೆಳಕಿಗೆ ಬಂದ ಬಳಿಕ ಅಂಧೇರಿಯ ಸಂಜಯ್ ಗುಲಾಟಿ ಹಾಗೂ ನಿವೇದಿತಾ ಬಿಜ್ಲಾನಿ, ಮುಳುಂಡ್ ಕಾಲನಿಯ ಮುಳೀಧರ ಧಾರ ಹಾಗೂ ಫಟ್ಟೊಮಲ್ ಪಂಜಾಬಿ ಕೆಲವೇ ಸಮಯದ ಅಂತರದಲ್ಲಿ ಮೃತಪಟ್ಟಿದ್ದರು. ಇವರೆಲ್ಲರೂ ಪಿಎಂಸಿ ಬ್ಯಾಂಕ್‌ನ ಠೇವಣಿದಾರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News