ಹೊಸದಿಲ್ಲಿ: ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ 40 ಲಕ್ಷ ಜನರಿಗೆ ಮಾಲಕತ್ವದ ಹಕ್ಕು

Update: 2019-10-23 17:31 GMT

ಹೊಸದಿಲ್ಲಿ, ಅ. 23: ದಿಲ್ಲಿಯ ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ ಸುಮಾರು 40 ಲಕ್ಷ ಜನರಿಗೆ ಮಾಲಕತ್ವದ ಹಕ್ಕು ನೀಡಲಾಗುವುದು ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ. ಅತಿ ದೊಡ್ಡ ನಡೆಯೊಂದರಲ್ಲಿ ಸುಮಾರು 1800 ಕಾಲನಿಗಳನ್ನು ಗುರುತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.

 ಕಾಲನಿಗಳು ಖಾಸಗಿ ಅಥವಾ ಸರಕಾರಿ ಜಾಗದಲ್ಲಿರಲಿ, ಅಲ್ಲಿ ವಾಸಿಸುವವರಿಗೆ ಮಾಲಕತ್ವದ ಹಕ್ಕು ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕಾಲನಿಗಳಲ್ಲಿ ಮನೆ ಕಟ್ಟಲು ಜನರು ಸಾಲ ತೆಗೆದುಕೊಳ್ಳಬಹುದು. ಸ್ವಾತಂತ್ರದ ಬಳಿಕ ದಿಲ್ಲಿಯಲ್ಲಿ ಆಗುತ್ತಿರುವ ಮೊದಲ ದೂರದರ್ಶಿತ್ವದ, ಪ್ರಗತಿಪರ ಕ್ರಾಂತಿಕಾರಿ ಬದಲಾವಣೆ ಇದಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News