ರಾಜಕೀಯ ಕುಸ್ತಿಯಲ್ಲಿ ಸೋತ ಯೋಗೇಶ್ವರ್ ದತ್, ಬಬಿತಾ ಫೋಗಟ್
Update: 2019-10-24 21:03 IST
ಹೊಸದಿಲ್ಲಿ, ಅ.24: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ದತ್ ಮತ್ತು ಬಬಿತಾ ಫೋಗಟ್ ಇಬ್ಬರೂ ಸೋಲನುಭವಿಸಿದ್ದಾರೆ.
ಬರೋಡಾದಲ್ಲಿ ಯೋಗೇಶ್ವರ್ ದತ್ ಮತ್ತು ಬಬಿತಾ ಫೋಗಟ್ ದಾದ್ರಿಯಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಹಾಲಿ ಶಾಸಕ ಶ್ರೀ ಕಿಶನ್ ಹೂಡಾ ವಿರುದ್ಧ ಯೋಗೇಶ್ವರ್ ದತ್ ಸೋಲನುಭವಿಸಿದ್ದರೆ, ದಾದ್ರಿಯಲ್ಲಿ ಸ್ವತಂತ್ರ ಅಭ್ಯರ್ಥಿ ಸೋಮ್ ವೀರ್ ಸಂಗ್ವಾನ್ ವಿರುದ್ಧ ಬಬಿತಾ ಸೋತಿದ್ದಾರೆ.
ತಾನು ಪ್ರಧಾನಿ ಮೋದಿಯವರ ಕೆಲಸದಿಂದ ಪ್ರೇರೇಪಿತನಾಗಿ ಮತ್ತು ರಾಷ್ಟ್ರೀಯತೆ ವಿಚಾರದಲ್ಲಿ ತನ್ನ ಚಿಂತನೆಗೆ ಅನುಗುಣವಾಗಿ ಸಿದ್ಧಾಂತವನ್ನು ಹೊಂದಿರುವ ಪಕ್ಷವಾಗಿರುವ ಕಾರಣ ಬಿಜೆಪಿಯನ್ನು ಸೇರುತ್ತಿದ್ದೇನೆ ಎಂದು ಯೋಗೇಶ್ವರ್ ದತ್ ಹೇಳಿದ್ದರು.