ಹರ್ಯಾಣದಲ್ಲಿ 7 ಸಚಿವರಿಗೆ ಸೋಲು
ಚಂಡೀಗಢ, ಅ.24: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾದ ಹಿನ್ನಡೆಯಿಂದ ಅಘಾತಗೊಂಡಿರುವ ಬಿಜೆಪಿಗೆ, ತನ್ನ ಸರಕಾರದ ಏಳು ಸಚಿವರು, ರಾಜ್ಯ ಘಟಕದ ಅಧ್ಯಕ್ಷ್ಷ ಹಾಗೂ ವಿಧಾನಸಭಾ ಸ್ಪೀಕರ್ ಸೋಲುಂಡಿರುವುದು ಭಾರೀ ಆಘಾತವುಂಟು ಮಾಡಿದೆ.
ಕರ್ನಾಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಹಾಗೂ ಅಂಬಾಲ ಕಂಟೋನ್ಮೆಂಟ್‌ನಲ್ಲಿ ಆರೋಗ್ಯ ಸಚಿವ ಅನಿಲ್ ವಿಜ್ ಜಯಗಳಿಸಿರುವುದನ್ನು ಬಿಟ್ಟರೆ ಉಳಿದ ಎಲ್ಲಾ ಸಂಪುಟ ಸಚಿವರು ತಮ್ಮ ಎದುರಾಳಿ ಅಭ್ಯರ್ಥಿಗಳ ಕೈಯಲ್ಲಿ ಸೋಲುಂಡಿದ್ದಾರೆ.
ಶಾಬಾದ್ ಮೀಸಲು ಕ್ಷೇತ್ರದಲಿ ಹರ್ಯಾಣ ಸಚಿವ ಕ್ರಿಶನ್ ಕುಮಾರ್ ಬೇಡಿ ಅವರು ತನ್ನ ಪ್ರತಿಸ್ಪರ್ಧಿ ಜೆಜೆಪಿ ಪಕ್ಷದ ರಾಮ್ ಕರಣ್ ಅವರ ಕೈಯಲ್ಲಿ ಸೋಲನುಭವಿಸಿದ್ದಾರೆ.
ಬಿಜೆಪಿಯ ಜನಪ್ರಿಯ ಅಭ್ಯರ್ಥಿ ಟಿಕ್‌ಟಾಕ್ ತಾರೆ ಸೋನಾಲಿ ಪೋಗಟ್ ಅವರು ಕಾಂಗ್ರೆಸ್ ನಾಯಕ ಕುಲದೀಪ್ ಬಿಷ್ಣೊಯಿ ಎದುರು ಅದಂಪುರ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ಹರ್ಯಾಣದ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಕಿರಿಯ ಪುತ್ರ ಬಿಷ್ಣೊಯಿ ಅವರು ಫೋಗಟ್ ಅವರನ್ನು 29,471 ಮತಗಳ ಅಂತರದಿಂದ ಸೋಲಿಸಿದ್ದಾರೆ.