BREAKING NEWS: ಹರ್ಯಾಣದಲ್ಲಿ ಬಿಜೆಪಿ- ಜೆಜೆಪಿ ಹೊಸ ಸರಕಾರ
Update: 2019-10-25 22:05 IST
ಹರ್ಯಾಣ, ಅ.25: ಹರ್ಯಾಣದಲ್ಲಿ ದುಷ್ಯಂತ್ ಚೌಟಾಲ ನೇತೃತ್ವದ ಜನನಾಯಕ್ ಜನತಾ ಪಾರ್ಟಿ(ಜೆಜೆಪಿ) ಜೊತೆ ಸೇರಿಕೊಂಡು ಹೊಸ ಸರಕಾರ ರಚಿಸಲು ಬಿಜೆಪಿ ಸಜ್ಜಾಗಿದೆ. ಈ ಕುರಿತು ಮಾತುಕತೆ ಅಂತಿಮಗೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾತ್ರಿ ತಿಳಿಸಿದ್ದಾರೆ.
ಹೊಸ ಸರಕಾರದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಹಾಗೂ ಜೆಜೆಪಿ ನಾಯಕ ಉಪಮುಖ್ಯಮಂತ್ರಿ ಆಗಲಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ 40, ಜೆಜೆಪಿ 10 ಹಾಗೂ ಕಾಂಗ್ರೆಸ್ ಗೆ 31 ಸ್ಥಾನಗಳು ಬಂದಿದ್ದವು. ಬಹುಮತಕ್ಕೆ 46 ಸ್ಥಾನಗಳು ಅಗತ್ಯ.
ಸರ್ಕಾರ ರಚಿಸುವ ಹಕ್ಕು ಮಂಡಿಸಲು ಶನಿವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದೇನೆ ಎಂದು ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.