ಮಂದಿನ ವರ್ಷ ಭಾರತದ ಆತಿಥ್ಯದಲ್ಲಿ ‘ಭೀತಿವಾದಕ್ಕೆ ಹಣವಿಲ್ಲ’ಸಮ್ಮೇಳನ

Update: 2019-11-07 16:05 GMT

ಹೊಸದಿಲ್ಲಿ,ನ.7: 2020ರಲ್ಲಿ ನಡೆಯಲಿರುವ ‘ಭೀತಿವಾದಕ್ಕೆ ಹಣವಿಲ್ಲ’ ಸಮ್ಮೇಳನದ ಮುಂದಿನ ಆವೃತ್ತಿಯನ್ನು ಭಾರತವು ಆಯೋಜಿಸಲಿದೆ ಎಂದು ಕೇಂದ್ರ ಸಚಿವ ಜಿ.ಕಿಶನ ರೆಡ್ಡಿ ಅವರು ಗುರುವಾರ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಈ ವರ್ಷದ ಸಮ್ಮೇಳನದಲ್ಲಿ ಪ್ರಕಟಿಸಿದ್ದಾರೆ.

‘ದಿ ಎಗ್ಮಂಟ್ ಗ್ರೂಪ್’ಎಂದು ಜಂಟಿಯಾಗಿ ಕರೆಯಲಾಗುವ,100ಕ್ಕೂ ಅಧಿಕ ದೇಶಗಳ ಹಣಕಾಸು ಗುಪ್ತಚರ ಘಟಕ (ಎಫ್‌ಐಯು)ಗಳು ‘ಭೀತಿವಾದಕ್ಕೆ ಹಣವಿಲ್ಲ’ ಸಮ್ಮೇಳನವನ್ನು ಸಂಘಟಿಸುತ್ತವೆ.

ಅಕ್ರಮ ಹಣ ವಹಿವಾಟು ಮತ್ತು ಭೀತಿವಾದಕ್ಕೆ ಹಣಕಾಸು ನೆರವಿನ ವಿರುದ್ಧದ ಹೋರಾಟದಲ್ಲಿ ಅಂತರರಾಷ್ಟ್ರಿಯ ಸಹಕಾರದ ಮಹತ್ವವನ್ನು ಮನಗಂಡಿದ್ದ ಎಫ್‌ಐಯುಗಳ ಗುಂಪೊಂದು ಕೆಲವು ವರ್ಷಗಳ ಹಿಂದೆ ಬೆಲ್ಜಿಯಮ್‌ನ ಬ್ರಸೆಲ್ಸ್‌ನಲ್ಲಿರುವ ಎಗ್ಮಂಟ್ ಆರೆನ್‌ಬರ್ಗ್ ಪ್ಯಾಲೇಸ್‌ನಲ್ಲಿ ಸಭೆ ಸೇರಿ ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲು ಎಫ್‌ಐಯುಗಳ ಔಪಚಾರಿಕ ಜಾಲವನ್ನು ಸ್ಥಾಪಿಸಲು ನಿರ್ಧರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News