ದಬಾಂಗ್ 3 ನಲ್ಲಿ ಸಲ್ಮಾನ್ ಹಾಡುವರೇ?

Update: 2019-11-10 10:41 GMT

ದಬಾಂಗ್ 3 ಬಿಡುಗಡೆಯನ್ನು ಬಾಲಿವುಡ್ ಸುಲ್ತಾನ್ ಸಲ್ಮಾನ್‌ಖಾನ್ ಅಭಿಮಾನಿಗಳು ತದೇಕಚಿತ್ತದಿಂದ ಕಾಯುತ್ತಿದ್ದಾರೆ. ದಬಾಂಗ್ ಚಿತ್ರದ ಮೊದಲ ಹಾಗೂ ಎರಡನೇ ಭಾಗವು ಸೂಪರ್ ಹಿಟ್ ಆಗಿದ್ದವು. ಸಲ್ಮಾನ್ ಅಭಿನಯ ಹಾಗೂ ಹಾಡುಗಳೇ ಈ ಚಿತ್ರದ ಜೀವಾಳವಾಗಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ದಬಾಂಗ್ 3ರಲ್ಲಿಯೂ ಸಲ್ಮಾನ್ ಖಾನ್ ತನ್ನ ಅಭಿಮಾನಿಗಳಿಗಾಗಿ ಹೊಸತೊಂದನ್ನು ನೀಡುವ ತವಕದಲ್ಲಿದ್ದಾರೆ. ಆದಾಗ್ಯೂ, ಈ ಚಿತ್ರದಲ್ಲಿ ಸಲ್ಮಾನ್‌ಖಾನ್ ಅವರು ತಮ್ಮ ಕಂಠಸಿರಿಯಿಂದಲೇ ಹಾಡೊಂದನ್ನು ಹಾಡುವ ಸಾಧ್ಯತೆಯಿದೆಯೆಂದು ಚಿತ್ರತಂಡದ ಮೂಲಗಳು ಹೇಳಿಕೊಂಡಿವೆ. ಸಿನೆಮಾ ಸಂಗೀತದ ಬಗ್ಗೆ ಸದಭಿರುಚಿ ಹೊಂದಿರುವ ಸಲ್ಮಾನ್‌ಖಾನ್, ತನ್ನ ಚಿತ್ರಗಳಲ್ಲಿನ ಹಾಡುಗಳ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆಂಬುದು ಬಾಲಿವುಡ್‌ನಲ್ಲಿ ಎಲ್ಲರಿಗೂ ತಿಳಿದಿರುವ ವಿಷಯ.

 ಅಂದಹಾಗೆ ಸಲ್ಮಾನ್ ಈ ಮೊದಲು ಹಲವಾರು ಸಿನೆಮಾಗಳಲ್ಲಿ ಹಾಡಿದ್ದಾರೆಂಬುದು ಅನೇಕರಿಗೆ ತಿಳಿದಿಲ್ಲ. ಅವುಗಳಲ್ಲಿ ಕೆಲವಂತೂ ಸೂಪರ್‌ಹಿಟ್ ಕೂಡಾ ಆಗಿವೆ. ಹೀರೋ ಚಿತ್ರದ ಮೈ ಹೂ ಹೀರೋ ತೇರಾ ಹಾಗೂ ಕಿಕ್ ಚಿತ್ರದ ಹ್ಯಾಂಗೊವರ್ ಹಾಡುಗಳನ್ನು ಅವರೇ ಹಾಡಿದ್ದು, ಅವು ಈಗಲೂ ಚಿತ್ರರಸಿಕರ ಮನದಲ್ಲಿ ಹಸಿರಾಗಿಯೇ ಉಳಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News