ಬೆಳ್ಳಿತೆರೆಯಲ್ಲಿ ಪಾಣಿಪತ್ ಕದನ

Update: 2019-11-10 10:43 GMT

ಬಾಜಿರಾವ್ ಮಸ್ತಾನಿ, ಪದ್ಮಾವತ್ ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್‌ನಲ್ಲಿ ಎಪಿಕ್ ಚಿತ್ರಗಳ ಯುಗ ಆರಂಭವಾಗಿದೆ. ಈ ವರ್ಷ ತೆರೆಕಂಡ ಝಾನ್ಸಿ ರಾಣಿ,ಕೇಸರಿ ಕೂಡಾ ಬಾಕ್ಸ್ ಆಫೀಸ್‌ನಲ್ಲಿ ಜಯಭೇರಿ ಬಾರಿಸಿವೆ.

ಇದೀಗ ಸಂಜಯ್‌ದತ್ತ್, ಅರ್ಜುನ್‌ಕಪೂರ್ ಅಭಿನಯದ ಐತಿಹಾಸಿಕ ಚಿತ್ರ ಪಾಣಿಪತ್ ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಟ್ರೇಲರ್ ಅನ್ನು ಅರ್ಜುನ್ ಕಪೂರ್ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಮೂರು ನಿಮಿಷ 40 ಸೆಕೆಂಡ್‌ಗಳ ಅವಧಿಯ ಈ ಟ್ರೇಲರ್ ಈಗಾಗಲೇ ವೈರಲ್ ಆಗಿದೆ. 1761ರಲ್ಲಿ ನಡೆದ ಮೂರನೇ ಪಾಣಿಪತ್ ಕದನವನ್ನು ಈ ಚಿತ್ರ ಆಧರಿಸಿದೆ. ದಂಡನಾಯಕ ಸದಾಶಿವರಾವ್ ಭಾವು (ಅರ್ಜುನ್‌ಕಪೂರ್) ಮರಾಠ ಸೈನ್ಯ ಹಾಗೂ ಮೊಗಲ್ ದೊರೆ ಅಹ್ಮದ್ ಶಾ ಅಬ್ದಾಲಿ (ಸಂಜಯ್‌ದತ್ತ್) ನ ಸೈನ್ಯಗಳ ನಡುವೆ ನಡೆದ ಭೀಕರ ಕದನದ ಕಥೆಯನ್ನು ಪಾಣಿಪತ್ ಹೇಳುತ್ತದೆ.

ಮರಾಠರಾಣಿ ಪಾರ್ವತಿ ಬಾಯಿಯಾಗಿ ಕೃತಿಸನೂನ್ ನಟಿಸಿದ್ದಾರೆ. ಕ್ಲೈ ಮಾಕ್ಸ್‌ನಲ್ಲಿ ಭೀಕರ ಪಾಣಿಪತ್ ಕದನದ ದೃಶ್ಯಗಳು ಅತ್ಯದ್ಭುತವಾಗಿ ಮೂಡಿಬಂದಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ಈ ಚಿತ್ರದ ಮೂಲಕ ದೀರ್ಘ ಸಮಯದ ಬಳಿಕ ನಟಿ ಪದ್ಮಿನಿ ಕೊಲ್ಹಾಪುರೆ ಬಾಲಿವುಡ್‌ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಹಿರಿಯ ನಟಿ ಝೀನತ್ ಅಮಾನ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಮೊಹ್ನಿಶ್ ಬೆಹ್ಲ್, ಕುಣಾಲ್‌ಕಪೂರ್ ಕೂಡಾ ಇದ್ದಾರೆ. ಲಗಾನ್, ಸ್ವದೇಶ್ ಖ್ಯಾತಿಯ ಅಶುತೋಷ್ ಗೋವಾರಿಕರ್ ನಿರ್ದೇಶನದ ಅಶುತೋಷ್ ಗೋವಾರಿಕರ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 6ರಂದು ತೆರೆಕಾಣಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News