4 ಚಿತ್ರಗಳ ನಾಯಕಿ ಅನಿತಾ

Update: 2019-11-10 10:46 GMT

ಸ್ಯಾಂಡಲ್ವುಡ್‌ನಲ್ಲಿ ನಾಲ್ಕು ಚಿತ್ರಗಳನ್ನು ಕೈಗೆತ್ತಿಕೊಂಡಿರುವ ಅನಿತಾಭಟ್ ಬಿಡುವಿಲ್ಲದ ನಟಿಯಾಗಿದ್ದಾರೆ. ಇದೀಗ ಸಾಮಾಜಿಕ ಥ್ರಿಲ್ಲರ್ ಕಥಾ ವಸ್ತುವಿರುವ ಬೆಂಗಳೂರು 69 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಕ್ರಾಂತಿ ಚೈತನ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ಚಿತ್ರದಲ್ಲೂ ನಟಿಸಿರುವ ಅನಿತಾ ಈಗ ಬೆಂಗಳೂರು 69 ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ದಿನಬೆಳಗಾಗುವುದರೊಳಗೆ ಶ್ರೀಮಂತರಾಗಲು ಬಯಸುವ ಇಬ್ಬರು ಸ್ನೇಹಿತರು ಹಾಗೂ ಅದರಿಂದಾಗಿ ಅವರಿಗೆ ಎದುರಾಗುವ ಪರಿಣಾಮಗಳ ಕುರಿತಾದ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿದೆ ಎಂದು ಅನಿತಾ ಹೇಳುತ್ತಾರೆ.

ಚಿತ್ರದಲ್ಲಿ ಅನಿತಾ ಜೊತೆ ಉದಯೋನ್ಮುಖ ತಾರೆಯರಾದ ಪವನ್ ಶೆಟ್ಟಿ ಹಾಗೂ ಜಯದೇವ್ ಮೋಹನ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು 69ಗೆ ಸೆನ್ಸಾರ್ ಮಂಡಳಿಯ ಅಂಗಳವನ್ನು ತಲುಪಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಮುಂದಿನ ವರ್ಷದ ಜನವರಿಯಲ್ಲಿ ಚಿತ್ರ ಬಿಡುಗಡೆಯ ಭಾಗ್ಯವನ್ನು ಕಾಣಲಿದೆ.

ಈ ನಡುವೆ ಅನಿತಾ ಅವರು ತನ್ನ ಇನ್ನೊಂದು ಚಿತ್ರ ಕನ್ನೇರಿಯ ಶೂಟಿಂಗ್ ಕೂಡಾ ಪೂರ್ಣಗೊಳಿಸಿದ್ದಾರೆ. ಇದೀಗ ಅವರು ಸದ್ಗುಣ ಸಂಪನ್ನ ಮಾಧವ ಹಾಗೂ ಕಲಿವೀರ ಚಿತ್ರಗಳ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News