×
Ad

ಫಾರೆಸ್ಟ್ ಗಂಪ್ ರಿಮೇಕ್‌ನಲ್ಲಿ ಆಮಿರ್ - ಕರೀನಾ 3

Update: 2019-11-10 16:18 IST

 ಇಡಿಯಟ್ಸ್‌ನಂತಹ ಸೂಪರ್‌ಹಿಟ್ ಚಿತ್ರವನ್ನು ನೀಡಿರುವ ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಹಾಲಿವುಡ್ ಚಿತ್ರ ಫಾರೆಸ್ಟ್ ಗಂಪ್‌ನ ಹಿಂದಿ ರಿಮೇಕ್‌ನಲ್ಲಿ ಈ ತಾರಾ ಜೋಡಿ ನಟಿಸಲಿದ್ದಾರೆ. ಲಾಲ್‌ಸಿಂಗ್ ಛಡ್ಡಾ ಎಂದು ಹೆಸರಿಡಲಾದ ಈ ಚಿತ್ರವನ್ನು ಆದ್ವೈತ್ ಚೌಹಾಣ್ ನಿರ್ದೇಶಿಸಲಿದ್ದಾರೆ. ವಿಯಾಕಾಮ್18 ಸ್ಟುಡಿಯೋಸ್‌ನೊಂದಿಗೆ ಸೇರಿ ಆಮಿರ್ ಖಾನ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ.ಚಿತ್ರದ ಪ್ರಿಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಬಾಲಿವುಡ್‌ನ ಮಿಸ್ಟರ್ ಪರ್‌ಫೆಕ್ಟ್ ಎಂದೇ ಹೆಸರಾಗಿರುವ ಆಮಿರ್‌ಖಾನ್, ಈ ಚಿತ್ರದ ಬಗ್ಗೆ ಇನ್ನಿಲ್ಲದ ಅಸ್ಥೆ ವಹಿಸಿದ್ದಾರೆ. ಬಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಈ ಚಿತ್ರದ ಅತ್ಯಾಕರ್ಷಕ ಲೋಗೊವನ್ನು ಆಮಿರ್‌ಖಾನ್ ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ.

ಚಿತ್ರದ ಉಳಿದಪಾತ್ರ ವರ್ಗದ ಆಯ್ಕೆ ನಡೆಯುತ್ತಿದ್ದು, ಬಹುಶಃ ಜನವರಿ ವೇಳೆಗೆ ಚಿತ್ರೀಕರಣ ಆರಂಭಗೊಳ್ಳುವ ನಿರೀಕ್ಷೆ ಇದೆ. ಕಡಿಮೆ ಬುದ್ಧಿಮತ್ತೆಯ ಯುವಕನೊಬ್ಬ ತನ್ನ ಬಾಲ್ಯದ ಗೆಳತಿಯ ಪ್ರೇಮಕ್ಕಾಗಿ ಪರಿತಪಿಸುವ ಮನೋಜ್ಞ ಕಥನವನ್ನು ಹೊಂದಿದ್ದ ಫಾರೆಸ್ಟ್ ಗಂಪ್ ಚಿತ್ರದಲ್ಲಿ ನಾಯಕ ಟಾಮ್ ಹಾಕ್ಸ್ ಶ್ರೇಷ್ಠ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಲಾಲ್‌ಸಿಂಗ್ ಛಡ್ಡಾ ಫಾರೆಸ್ಟ್ ಗಂಪ್‌ನ ರಿಮೇಕ್ ಆದರೂ, ಭಾರತದ ನೆಟಿವಿಟಿಗೆ ಹೊಂದಿಕೊಳ್ಳುವಂತೆ ಮಾಡಲು ಚಿತ್ರದ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News