ಗೋಡ್ಸೆ ಇದ್ದಿದ್ದರೆ ಆತ ದೇಶಭಕ್ತ ಎಂಬ ತೀರ್ಪು ಬರುತ್ತಿತ್ತು: ತುಷಾರ್ ಗಾಂಧಿ

Update: 2019-11-10 14:53 GMT

ಹೊಸದಿಲ್ಲಿ,ನ.10: ಸರ್ವೋಚ್ಚ ನ್ಯಾಯಾಲಯವು ಇಂದು ಮಹಾತ್ಮಾ ಗಾಂಧಿಯವರ ಕೊಲೆ ಪ್ರಕರಣದ ಮರು ವಿಚಾರಣೆಯನ್ನು ನಡೆಸಿದ್ದರೆ ನಾಥುರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿತ್ತೇನೋ ಎಂದು ತುಷಾರ್ ಗಾಂಧಿ ಅವರು ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗುರಿಯಾಗಿಸಿಕೊಂಡು ಹೇಳಿದ್ದಾರೆ.

“ಗಾಂಧಿ ಕೊಲೆ ಪ್ರಕರಣವನ್ನು ಇಂದು ಸರ್ವೋಚ್ಚ ನ್ಯಾಯಾಲಯವು ಮರುವಿಚಾರಣೆ ನಡೆಸಿದ್ದರೆ ಗೋಡ್ಸೆ ಕೊಲೆಗಾರ,ಆದರೆ ದೇಶಭಕ್ತನೂ ಹೌದು ಎಂಬ ತೀರ್ಪು ಬರುತ್ತಿತ್ತು”ಎಂದು ಗಾಂಧೀಜಿಯವರ ಮರಿಮೊಮ್ಮಗನಾಗಿರುವ ತುಷಾರ್ ಟ್ವೀಟಿಸಿದ್ದಾರೆ.

ಆದರೆ,ಯಾರೇ ಆದರೂ ತೀರ್ಪನ್ನು ಗೌರವಿಸದಿದ್ದರೂ ಅದನ್ನು ಸ್ವೀಕರಿಸಬೇಕು ಮತ್ತು ಅದಕ್ಕೆ ವಿಧೇಯರಾಗಿರಬೇಕು ಎಂದಿರುವ ತುಷಾರ್, ನ್ಯಾಯಾಂಗ ವ್ಯವಸ್ಥೆಗೆ ‘ನಂಬಿಕೆಯ ಅಪರಾಧ ’ಎಂಬ ಹೊಸ ವರ್ಗವೊಂದನ್ನು ಸೇರಿಸಲಾಗಿದೆ ಎಂದಿದ್ದಾರೆ.

ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೊಂದು ಮತ್ತು ಮಸೀದಿ ನಿರ್ಮಾಣಕ್ಕೊಂದು,ಹೀಗೆ ಎರಡು ಮಂಡಳಿಗಳನ್ನು ಸವೋಚ್ಚ ನ್ಯಾಯಾಲಯವು ರಚಿಸಿದ್ದರೆ ನ್ಯಾಯವು ದೊರಕುತ್ತಿತ್ತು. ಎಲ್ಲರನ್ನೂ ಮೆಚ್ಚಿಸುವುದು ನ್ಯಾಯವಲ್ಲ,ಎಲ್ಲರನ್ನೂ ಮೆಚ್ಚಿಸುವುದು ರಾಜಕೀಯ ಎಂದೂ ಅವರು ಹೇಳಿದ್ದಾರೆ.

ನಮ್ಮ ದೇಶವನ್ನು ಕಾಡುತ್ತಿರುವ ನಿಜವಾದ ಸಮಸ್ಯೆಗಳತ್ತ ಹಿಂದಿರುಗಿ ನೋಡುವಂತೆ ತುಷಾರ್ ತೀರ್ಪಿಗೆ ಮುನ್ನ ಜನರನ್ನು ಕೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News