ಡೇವಿಸ್ ಕಪ್ ತಟಸ್ಥ ತಾಣಕ್ಕೆ ಸ್ಥಳಾಂತರ

Update: 2019-11-11 19:04 GMT

ಕರಾಚಿ, ನ.11: ಭಾರತ ವಿರುದ್ಧದ ಡೇವಿಸ್ ಕಪ್ ಪಂದ್ಯವನ್ನು ಇಸ್ಲಾಮಾಬಾದ್‌ನಿಂದ ತಟಸ್ಥ ತಾಣಕ್ಕೆ ಬದಲಾಯಿಸಿರುವ ನಿರ್ಧಾರವನ್ನು ಪ್ರಶ್ನಿಸಿ ಪಾಕಿಸ್ತಾನವು ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟಕ್ಕೆ(ಐಟಿಎಫ್)ಮೇಲ್ಮನವಿ ಸಲ್ಲಿಸಿದೆ.

 ‘‘ಐಟಿಎಫ್‌ಗೆ ಅಧಿಕೃತ ಮೇಲ್ಮನವಿ ಸಲ್ಲಿಸಲಾಗಿದೆ. ನ.15ಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆಯಲ್ಲಿದ್ದೇವೆ. ಡೇವಿಸ್ ಕಪ್ ಪಂದ್ಯವನ್ನು ಆಯೋಜಿಸಲು ನಾವು ಸಂಪೂರ್ಣ ಸಜ್ಜಾಗಿರುವುದನ್ನು ಸೂಚಿಸಿದ್ದೇವೆ. ಪಾಕ್‌ನಲ್ಲಿ ಯಾವುದೇ ಅಭದ್ರತೆ ಯಿಲ್ಲ. ಉಭಯ ದೇಶಗಳ ಮಧ್ಯೆ ರಾಜಕೀಯ ಪ್ರವೇಶಿಸಬಾರದು ಹಾಗೂ ಪ್ರಮುಖ ಟೂರ್ನಿಯನ್ನು ಆಯೋಜಿಸುವ ಅವಕಾಶವನ್ನು ತಪ್ಪಿಸಬಾರದು’’ ಎಂದು ಪಾಕಿಸ್ತಾನ ಟೆನಿಸ್ ಒಕ್ಕೂಟ(ಪಿಟಿಎಫ್)ಅಧ್ಯಕ್ಷ ಸಲೀಂ ಸಫಿವುಲ್ಲಾ ರವಿವಾರ ತಿಳಿಸಿದ್ದಾರೆ.

 ಪಾಕಿಸ್ತಾನ ಈ ಮೊದಲೇ ಸೆಪ್ಟಂಬರ್ 14-15ರಂದು ಡೇವಿಸ್ ಕಪ್ ಏಶ್ಯ ಒಶಿಯಾನಿಯ ಗ್ರೂಪ್-1 ಪಂದ್ಯದ ಆತಿಥ್ಯವಹಿಸಿಕೊಳ್ಳಬೇಕಾಗಿತ್ತು. ಡೇವಿಸ್ ಕಪ್ ಪಂದ್ಯವನ್ನು ಇಸ್ಲಾಮಾಬಾದ್‌ನಿಂದ ಸ್ಥಳಾಂತರಿಸಬೇಕು ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ ಮನವಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ಈ ತಿಂಗಳಾರಂಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಐಟಿಎಫ್ ಪಾಕಿಸ್ತಾನ ಆಯ್ಕೆ ಮಾಡುವ ತಟಸ್ಥ ತಾಣದಲ್ಲಿ ಡೇವಿಸ್ ಕಪ್ ಪಂದ್ಯ ನಡೆಯಲಿದೆ ಎಂದು ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News