ಟಾಟಾ ಗ್ರೂಪ್‌ ನಿಂದ ಬಿಜೆಪಿಗೆ 356 ಕೋ.ರೂ.!

Update: 2019-11-13 04:05 GMT

ಹೊಸದಿಲ್ಲಿ,ನ.12: ಬಿಜೆಪಿಯು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಂತೆ ಪಕ್ಷವು 2018-19ನೇ ಸಾಲಿನಲ್ಲಿ ಚೆಕ್‌ಗಳು ಮತ್ತು ಆನ್‌ಲೈನ್ ಪಾವತಿಗಳ ಮೂಲಕ ಒಟ್ಟು 700 ಕೋ.ರೂ.ಗೂ ಹೆಚ್ಚಿನ ದೇಣಿಗೆಗಳನ್ನು ಸ್ವೀಕರಿಸಿದ್ದು,ಈ ಪೈಕಿ ಅರ್ಧಕ್ಕೂ ಹೆಚ್ಚು ಅಂದರೆ 356 ಕೋ.ರೂ.ಗಳು ಟಾಟಾ ಗ್ರೂಪ್ ನಿಯಂತ್ರಿತ ಪ್ರೊಗ್ರೆಸಿವ್ ಎಲೆಕ್ಟೋರಲ್ ಟ್ರಸ್ಟ್‌ನಿಂದ ಸಂದಾಯವಾಗಿವೆ.

ಭಾರತದ ಅತ್ಯಂತ ಶ್ರೀಮಂತ ಟ್ರಸ್ಟ್ ಆಗಿರುವ ದಿ ಪ್ರುಡಂಟ್ ಎಲೆಕ್ಟೋರಲ್ ಟ್ರಸ್ಟ್ ಬಿಜೆಪಿಗೆ 54.25 ಕೋ.ರೂ. ದೇಣಿಗೆಯನ್ನು ನೀಡಿದೆ. ಅದು ಭಾರ್ತಿ ಗ್ರೂಪ್,ಹಿರೋ ಮೋಟೊ ಗ್ರೂಪ್,ಜ್ಯುಬಿಲಂಟ್ ಫುಡ್ ವರ್ಕ್ಸ್, ಓರಿಯೆಂಟ್ ಸಿಮೆಂಟ್,ಡಿಎಲ್‌ಎಫ್,ಜೆಕೆ ಟೈರ್ಸ್‌ನಂತಹ ಪ್ರಮುಖ ಕಂಪನಿಗಳ ಬೆಂಬಲವನ್ನು ಹೊಂದಿದೆ.

ಚುನಾವಣಾ ಆಯೋಗಕ್ಕೆ ಒದಗಿಸಲಾಗಿರುವ ಮಾಹಿತಿಯು ಪಕ್ಷವು ಚೆಕ್‌ಗಳು ಮತ್ತು ಆನ್‌ಲೈನ್ ಪಾವತಿಗಳ ಮೂಲಕ ಸ್ವೀಕರಿಸಿರುವ 20,000 ರೂ.ಮತ್ತು ಅದಕ್ಕಿಂತ ಹೆಚ್ಚಿನ ದೇಣಿಗೆಗಳಿಗೆ ಸಂಬಂಧಿಸಿದೆ. ಚುನಾವಣಾ ಬಾಂಡ್‌ಗಳ ರೂಪದಲ್ಲಿ ಸ್ವೀಕರಿಸಲಾಗಿರುವ ದೇಣಿಗೆಗಳು ಇದರಲ್ಲಿ ಸೇರಿಲ್ಲ. ಪಕ್ಷವು ವ್ಯಕ್ತಿಗಳು,ಕಂಪನಿಗಳು ಮತ್ತು ಟ್ರಸ್ಟ್‌ಗಳಿಂದ ದೇಣಿಗೆಗಳನ್ನು ಸ್ವೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News