ದಿಲ್ಲಿಯಲ್ಲಿ ಮತ್ತೆ ತೀವ್ರಗೊಂಡ ವಾಯು ಮಾಲಿನ್ಯ

Update: 2019-11-12 16:28 GMT

ಹೊಸದಿಲ್ಲಿ, ನ. 12: ಹೊಸದಿಲ್ಲಿಯಲ್ಲಿ ವಾಯು ಗುಣಮಟ್ಟ ಮತ್ತೆ ಹದಗೆಟ್ಟಿದೆ ಹಾಗೂ ಮಂಗಳವಾರ ಬೆಳಗ್ಗೆ ‘ಗಂಭೀರ’ ಮಟ್ಟಕ್ಕೆ ಇಳಿದಿದೆ. ಬೆಳಗ್ಗೆ 9.36ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 414 ದಾಖಲಾಗಿತ್ತು. ಬಾವನಾ, ವಾಝಿಪುರ, ಆನಂದ್ ವಿಹಾರ್ ಹಾಗೂ ರೋಹಿಣಿಯಲ್ಲಿ ಅನುಕ್ರಮವಾಗಿ ವಾಯು ಗುಣಮಟ್ಟ ಸೂಚ್ಯಂಕ 445, 442, 442 ಹಾಗೂ 440 ದಾಖಲಾಗಿತ್ತು.

ನಗರದಲ್ಲಿ ವಾಯು ಗುಣಮಟ್ಟ ಸೋಮವಾರ ತುಂಬಾ ಕಳಪೆಯಾಗಿತ್ತು. ಸಂಜೆ ಗಂಭೀರವಾಯಿತು. ರವಿವಾರ ವಾಯು ಗುಣಮಟ್ಟ ಸೂಚ್ಯಾಂಕ ಸರಾಸರಿ 360 ದಾಖಲಾಗಿತ್ತು ಎಂದು ಸರಕಾರದ ವಾಯು ಗುಣಮಟ್ಟದ ನಿಗಾ ಸೇವೆ ನೀಡುವ ಸಂಸ್ಥೆ ಸಫರ್ (ಎಸ್‌ಎಎಫ್‌ಎಆರ್) ತಿಳಿಸಿದೆ. ಎನ್‌ಸಿಆರ್‌ನ ನೋಯ್ಡೆದಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ 436, ಗಾಝಿಯಾಬಾದ್‌ನಲ್ಲಿ 445 ದಾಖಲಾಗಿದೆ. ಗ್ರೇಟರ್ ನೋಯ್ಡಾ, ಗುರ್ಗಾಂವ್, ಫರಿದಾಬಾದ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಾಂಕ ಅನುಕ್ರಮವಾಗಿ 436, 365 ಹಾಗೂ 404 ದಾಖಲಾಗಿದೆ. ಹೊಸದಿಲ್ಲಿಯಲ್ಲಿರುವ 37 ವಾಯು ಗುಣಮಟ್ಟ ನಿಗಾ ಕೇಂದ್ರಗಳಲ್ಲಿ ಹೆಚ್ಚಿನ ಕೇಂದ್ರಗಳು ಸೋಮವಾರ ವಾಯು ಗುಣಮಟ್ಟವನ್ನು ‘ಗಂಭೀರ’ ಸ್ಥಿತಿಯಲ್ಲಿ ಇರುವುದನ್ನು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News