‘ಬುಲ್‌ಬುಲ್‌ನಿಂದ 50 ಸಾವಿರ ಕೋಟಿ ರೂ. ನಷ್ಟ’

Update: 2019-11-13 16:37 GMT
ಫೋಟೋ: PTI

  ಬಸಿರ್‌ಹಾಟ್ ,(ಪ.ಬಂಗಾಳ) ನ.13: ‘ಬುಲ್‌ಬುಲ್’ ಚಂಡಮಾರುತದ ರುದ್ರನರ್ತನಕ್ಕೆ  ತತ್ತರಿಸಿರುವ ಉತ್ತರ 24 ಪರಗಣ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಚಂಡಮಾರುತದಿಂದ ರಾಜ್ಯದಲ್ಲಿ 50 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅವರು ತಿಳಿಸಿದ್ದಾರೆ.

  ಬುಲ್‌ಬುಲ್ ಚಂಡಮಾರುತದ ಪ್ರಕೋಪಕ್ಕೆ ಬಲಿಯಾದ ಐದು ಮಂದಿಯ ಸಂತ್ರಸ್ತ ಕುಟುಂಬಗಳಿಗೆ ಅವರು ತಲಾ 2.4 ಲಕ್ಷ ರೂ.ಗಳನ್ನು ಚೆಕ್ ಮೂಲಕ ಹಸ್ತಾಂತರಿಸಿದರು.

ಚಂಡಮಾರುತದಿಂದಾಗಿ ಕನಿಷ್ಠ 15 ಲಕ್ಷ ಎಕರೆಯಷ್ಟು ಕೃಷಿಭೂಮಿಗೆ ಹಾನಿಯಾಗಿರುವುದಾಗಿ ತಿಳಿಸಿದ ಮಮತಾ ಅವರು ತನ್ನ ಸರಕಾರವು ಸಂತ್ರಸ್ತ ರೈತರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

ನಾನು ನೋಡಿರುವ ಪ್ರಕಾರ ಚಂದಮಾರುತದಿಂದ ಭಾರೀ ವಿನಾಶವುಂಟಾಗಿದೆ. ಕೋಲ್ಕತಾ ಹಾಗೂ ರಾಜ್ಯದ ಇತರ ಭಾಗಗಳಲ್ಲಿನ ಜನರಿಗೆ ಈ ವಿನಾಶದ ಪ್ರಮಾಣವನ್ನು ಅರಿಯಲು ಸಾಧ್ಯವಿಲ್ಲವೆಂದವರು ಹೇಳಿದರು. ರಾಜ್ಯ ಸರಕಾರದ ಬೆಳೆ ವಿಮೆ ಯೋಜನೆಗೆ ನೋಂದಣಿಯಾದವರು ತಮಗಾದ ನಷ್ಟಕ್ಕಾಗಿ ಶೇ.100ರಷ್ಟು ವಿಮಾ ಪರಿಹಾರ ಪಡೆಯಲಿದ್ದಾರೆ ಎಂದು ಆಕೆ ಸ್ಪಷ್ಟಪಡಿಸಿದರು.

 ಸಂತ್ರಸ್ತ ರೈತರಿಗಾಗಿ ವಿಶೇಷ ಪ್ಯಾಕೇಜ್ ಅನ್ನು ರಾಜ್ಯ ಸರಕಾರವು ಶೀಘ್ರದಲ್ಲೇ ಘೋಷಿಸಲಿದೆಯೆಂದು ಮಮತಾ ಬ್ಯಾನರ್ಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News