ಡಿ.1ರಿಂದ ಕಬಡ್ಡಿ ವಿಶ್ವಕಪ್ ಟೂರ್ನಿ ಆರಂಭ

Update: 2019-11-14 02:02 GMT

ಚಂಡಿಗಢ, ನ.13: ಪಂಜಾಬ್ ಸರಕಾರ 2019ರ ಕಬಡ್ಡಿ ವಿಶ್ವಕಪ್‌ನ್ನು ಡಿ.1ರಿಂದ 9ರ ತನಕ ಆಯೋಜಿಸಲಿದೆ ಎಂದು ರಾಜ್ಯ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಬುಧವಾರ ತಿಳಿಸಿದ್ದಾರೆ.

ಈ ವರ್ಷದ ಟೂರ್ನಮೆಂಟ್‌ನ್ನು 550ನೇ ಜಯಂತಿ ಅಂಗವಾಗಿ ಸಿಖ್ ಗುರು ಗುರು ನಾನಕ್ ದೇವ್‌ಗೆ ಅರ್ಪಿಸಲಾಗುವುದು ಎಂದು ಸೋಧಿ ತಿಳಿಸಿದ್ದಾರೆ.

ಟೂರ್ನಮೆಂಟ್‌ನಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯ, ಇಂಗ್ಲೆಂಡ್, ಶ್ರೀಲಂಕಾ, ಕೀನ್ಯ, ನ್ಯೂಝಿಲ್ಯಾಂಡ್, ಪಾಕಿಸ್ತಾನ ಹಾಗೂ ಕೆನಡಾ ಸೇರಿದಂತೆ ಒಟ್ಟು 9 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಪಾಕಿಸ್ತಾನ, ಕೆನಡಾ ಹೊರತುಪಡಿಸಿ ಎಲ್ಲ ತಂಡಗಳಿಗೆ ಕೇಂದ್ರ ಸರಕಾರ ನಿರಾಪೇಕ್ಷಣಾ ಪತ್ರ(ಎನ್‌ಒಸಿ) ನೀಡಿದೆ. ಪಾಕ್, ಕೆನಡಾ ದೇಶಗಳು ಎನ್‌ಒಸಿ ನಿರೀಕ್ಷೆಯಲ್ಲಿವೆ ಎಂದು ಸೋಧಿ ತಿಳಿಸಿದ್ದಾರೆ.

ಡಿ.1ರಂದು ಸುಲ್ತಾನ್‌ಪುರ ಲೋಧಿಯಲ್ಲಿರುವ ಗುರು ನಾನಕ್ ಸ್ಟೇಡಿಯಂನಲ್ಲಿ ಟೂರ್ನಿಯ ಉದ್ಘಾಟನೆ ಸಮಾರಂಭ ನಡೆಯಲಿದೆ. ಸಮಾರೋಪ ಸಮಾರಂಭ ಡೇರಾ ಬಾಬಾ ನಾನಕ್‌ನಲ್ಲಿರುವ ಶಾಹೀದ್ ಭಗತ್ ಸಿಂಗ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಮಿ ಫೈನಲ್ ಪಂದ್ಯಗಳು ಶ್ರೀ ಆನಂದಪುರ ಸಾಹಿಬ್‌ನಲ್ಲಿರುವ ಚಾರಂಗಂಗಾದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News