ಜೊಕೊವಿಕ್‌ಗೆ ಡೊಮಿನಿಕ್ ಶಾಕ್

Update: 2019-11-14 02:06 GMT

ಲಂಡನ್, ನ.13: ಆಕ್ರಮಣಕಾರಿ ಟೆನಿಸ್‌ನ್ನು ಆಡಿದ ಡೊಮಿನಿಕ್ ಥೀಮ್ ವಿಶ್ವದ ನಂ.2ನೇ ಆಟಗಾರ ನೊವಾಕ್ ಜೊಕೊವಿಕ್‌ಗೆ ಶಾಕ್ ನೀಡಿ ಎಟಿಪಿ ಫೈನಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಲಂಡನ್‌ನ 2ನೇ ಅರೆನಾದಲ್ಲಿ ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯದ ಐದನೇ ಶ್ರೇಯಾಂಕದ ಆಟಗಾರ ಡೊಮಿನಿಕ್ 16 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಸರ್ಬಿಯದ ಜೊಕೊವಿಕ್‌ರನ್ನು 6-7(5/7), 6-3, 7-6(7/5) ಸೆಟ್‌ಗಳ ಅಂತರದಿಂದ ಮಣಿಸಿದರು.

  ಇದಕ್ಕೂ ಮೊದಲು ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ ಇಟಲಿಯ ಮಟ್ಟೆಯೊ ಬೆರ್ರೆಟ್ಟಿನಿ ವಿರುದ್ಧ 7-6(7/2), 6-3 ಅಂತರದಿಂದ ಜಯ ಸಾಧಿಸಿದರು. ಫೆಡರರ್ ಹಾಗೂ ಜೊಕೊವಿಕ್ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಇದು ಈ ವರ್ಷದ ವಿಂಬಲ್ಡನ್ ಫೈನಲ್‌ನ ಪುನರಾವರ್ತನೆಯಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಆಟಗಾರ ಜೊರ್ನ್ ಬರ್ಗ್ ಗುಂಪಿನಿಂದ ಮುಂದಿನ ಸುತ್ತಿಗೆ ತೇರ್ಗಡೆಯಾಗಲಿದ್ದಾರೆ. ಅಗ್ರ ಶ್ರೇಯಾಂಕದ ರಫೆಲ್ ನಡಾಲ್ ಸೋಮವಾರ ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಆ್ಯಂಡ್ರೆ ಅಗಾಸ್ಸಿ ಗುಂಪಿನ ಮೊದಲ ಪಂದ್ಯದಲ್ಲಿ ಸೋತಿದ್ದರು. ಸಿಟ್‌ಸಿಪಾಸ್ ಅವರು ಡೆನಿಲ್ ಮೆಡ್ವೆಡೆವ್‌ರನ್ನು ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News