ಡಿಸೆಂಬರ್ 12ರಂದು ಕರ್ನಾಟಕ, ಉತ್ತರಪ್ರದೇಶದ ತಲಾ 1 ರಾಜ್ಯ ಸಭಾ ಸ್ಥಾನಕ್ಕೆ ಉಪ ಚುನಾವಣೆ

Update: 2019-11-14 17:50 GMT

ಹೊಸದಿಲ್ಲಿ, ನ. 14: ಇತ್ತೀಚೆಗೆ ತೆರವಾದ ಕರ್ನಾಟಕ ಹಾಗೂ ಉತ್ತರಪ್ರದೇಶ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಡಿಸೆಂಬರ್ 12ರಂದು ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯುಕ್ತ ಗುರುವಾರ ಘೋಷಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ಕೆ.ಸಿ. ಕುಮಾರಸ್ವಾಮಿ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಬಳಿಕ ಕರ್ನಾಟಕದಲ್ಲಿ ಒಂದು ರಾಜ್ಯಸಭಾ ಸ್ಥಾನ ತೆರವಾಗಿತ್ತು.

 ರಾಂಪುರ ವಿಧಾನ ಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷದ ಸದಸ್ಯೆ ತಝೀನ್ ಪಾತಿಮಾ ರಾಜೀನಾಮೆ ನೀಡಿದ ಬಳಿಕ ಉತ್ತರಪ್ರದೇಶದ ಒಂದು ರಾಜ್ಯಸಭಾ ಸ್ಥಾನ ತೆರವಾಗಿತ್ತು.

ಈ ಕ್ಷೇತ್ರದವನ್ನು ಒಮ್ಮೆ ಅವರ ಪತಿ ಅಝಮ್ ಖಾನ್ ಪ್ರತಿನಿಧಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಖಾನ್ ರಾಮ್‌ಪುರ ವಿಧಾನ ಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಮಮೂರ್ತಿ ಅವರ ಅಧಿಕಾರ ಅವಧಿ 2022 ಜೂನ್ 30ರಂದು ಹಾಗೂ ಪಾತಿಮಾ ಅವರ ಅಧಿಕಾರ ಅವಧಿ 2020 ನವೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ ಚುನಾವಣೆ ಪೂರ್ಣಗೊಂಡ ಬಳಿಕ ಡಿಸೆಂಬರ್ 12ರಂದು ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News