ಇಂಡೋನೇಶ್ಯಾದಲ್ಲಿ 7.1 ತೀವ್ರತೆ ಭೂಕಂಪ: ಸುನಾಮಿ ಭೀತಿ

Update: 2019-11-14 18:33 GMT

 ಜಕಾರ್ತ, ನ. 14: ಇಂಡೋನೇಶಿಯಾ ದ್ವೀಪದ ಟೆರ್ನಾಟೆಯಿಂದ 134 ಕಿ.ಮೀ. ವಾಯುವ್ಯದ ಮೊಲುಕ್ಕಾ ಸಮುದ್ರದಲ್ಲಿ ಗುರುವಾರ ಸ್ಥಳೀಯ ಕಾಲಮಾನ ಅಪರಾಹ್ನ 4.18ಕ್ಕೆ 7.1 ತೀವ್ರತೆಯ ಭೂಕಂಪ ಸಂಭವಿಸಿದೆ.

 ಭೂಕಂಪ ಕೇಂದ್ರದಿಂದ 300 ಕಿ.ಮೀ. ಒಳಗಿರುವ ಎಲ್ಲ ಕರಾವಳಿಯಲ್ಲಿ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಸುನಾಮಿ ಪರಿಣಾಮ ಒಂದು ಗಂಟೆಯ ಒಳಗಡೆ ಇಂಡೋನೇಶ್ಯಾದ ಹಲವು ದ್ವೀಪಗಳ ಮೇಲೆ ಉಂಟಾಗಲಿದೆ.

  ಇಂಡೋನೇಶ್ಯಾದ ಮೆಟರಾಲಜಿ, ಕ್ಲೈಮೆಟಾಲಜಿ ಹಾಗೂ ಜಿಯೋಫಿಸಿಕ್ಸ್ ಏಜೆನ್ಸಿ ಕೂಡ ಸುನಾಮಿ ಮುನ್ನೆಚ್ಚರಿಕೆ ನೀಡಿದೆ. ಟೆರ್ನಾಟೆ ಹಾಗೂ ಸುಲವೇಸಿ ದ್ವೀಪಗಳ ನಡುವೆ 62 ಕಿ.ಮೀ. ಆಳದಲ್ಲಿ ಈ ಭೂಕಂಪ ಅಪ್ಪಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News