ಭಾರತ-ಅಫ್ಘಾನ್ ಪಂದ್ಯ ಡ್ರಾ

Update: 2019-11-15 05:02 GMT

ಡುಶಾನ್ಬೆ(ತಜಿಕಿಸ್ತಾನ), ನ.14: ಇಂಜುರಿ ಟೈಮ್‌ನಲ್ಲಿ ಗೋಲು ಗಳಿಸಿದ ಭಾರತ ತಂಡ ಗುರುವಾರ ಇಲ್ಲಿ ಕೆಳ ರ್ಯಾಂಕಿನ ಅಫ್ಘಾನಿಸ್ತಾನ ತಂಡದ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸೋಲಿನಿಂದ ಪಾರಾಗಿದೆ. ಈ ಫಲಿತಾಂಶದೊಂದಿಗೆ 106ನೇ ರ್ಯಾಂಕಿನ ಭಾರತಕ್ಕೆ ಅರ್ಹತಾ ಟೂರ್ನಿಯಲ್ಲಿ ಗೆಲುವು ಮತ್ತೊಮ್ಮೆ ಮರೀಚಿಕೆಯಾಯಿತು. ಭಾರತ ಟೂರ್ನಿಯಲ್ಲಿ 2ನೇ ಸೋಲಿನತ್ತ ಮುಖ ಮಾಡಿದ್ದಾಗ 90+3 ನಿಮಿಷದಲ್ಲಿ ಗೋಲು ಗಳಿಸಿದ ಸೆಲ್ಮಿನ್ಲೆನ್ ಡೌಂಗೆಲ್ ಭಾರತಕ್ಕೆ ಜೀವದಾನ ನೀಡಿದರು. ನಝರಿ ಮೊದಲಾರ್ಧದ ಇಂಜುರಿ ಟೈಮ್‌ನಲ್ಲಿ(45+1ನೇ ನಿಮಿಷ)ಬಾರಿಸಿದ ಗೋಲು ನೆರವಿನಿಂದ ಅಫ್ಘಾನಿಸ್ತಾನ 1-0 ಮುನ್ನಡೆ ಸಾಧಿಸಿತು. 149ನೇ ರ್ಯಾಂಕಿನ ಅಫ್ಘಾನ್ 9 ಡಿಗ್ರಿ ಸೆೆಲ್ಸಿಯಸ್‌ಗೆ ಕುಸಿದ ಕೊರೆಯುವ ಚಳಿಯ ವಾತಾವರಣದಲ್ಲಿ ತನಗಿಂತ ಗರಿಷ್ಠ ರ್ಯಾಂಕಿನ ಭಾರತ ವಿರುದ್ಧ ಚಳಿ ಬಿಟ್ಟು ಆಡಿ ಗಮನ ಸೆಳೆಯಿತು. 4 ಪಂದ್ಯಗಳಲ್ಲಿ 3 ಅಂಕ ಗಳಿಸಿರುವ ಭಾರತ ಱಇೞಗುಂಪಿನಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. 4 ಅಂಕ ಗಳಿಸಿರುವ ಅಫ್ಘಾನ್ 3ನೇ ಸ್ಥಾನದಲ್ಲಿ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News