ಶಬರಿಮಲೆಗೆ ಭೇಟಿ ನೀಡುವ ಮಹಿಳೆಯರಿಗೆ ರಕ್ಷಣೆ ನೀಡುವುದಿಲ್ಲ: ಕೇರಳ ಸಚಿವ

Update: 2019-11-15 14:11 GMT
PTI

ತಿರುವನಂತಪುರ, ನ. 15: ಮಹಿಳೆಯರಿಗೆ ರಕ್ಷಣೆ ನೀಡಿ ಶಬರಿಮಲೆ ದೇವಾಲಯಕ್ಕೆ ಕರೆದೊಯ್ಯುವ ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಎಡರಂಗ ನೇತೃತ್ವ ಕೇರಳ ಸರಕಾರ ಶುಕ್ರವಾರ ಹೇಳಿದ್ದಾರೆ.

ಮಹಿಳೆಯರು ಅನುಮತಿ ಪಡೆಯದೆ ದೇವಾಲಯ ಪ್ರವೇಶಿಸುವುದನ್ನು ನಾವು ಬೆಂಬಲಿಸುವುದಿಲ್ಲ ಎಂದು ರಾಜ್ಯ ದೇವಾಲಯ ವ್ಯವಹಾರಗಳ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.

‘‘ದೇವಾಲಯದಲ್ಲಿ ಯಥಾಸ್ಥಿತಿ ಕಾಪಾಡುವುದು ಸೂಕ್ತವಾಗಿದೆ. ಶಾಂತಿ ಕಾಪಾಡುವುದು ಸರಕಾರದ ಜವಾಬ್ದಾರಿ’’ ಎಂದು ಅವರು ತಿರುವನಂತಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

  ಭೂಮಾತಾ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಅವರ ಶಬರಿಮಲೆ ಭೇಟಿಯ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಶಬರಿಮಲೆ ಹೋರಾಟಗಾರರಿಗೆ ಇರುವ ಸ್ಥಳವಲ್ಲ. ಯಾರಿಗಾದರೂ ಅಲ್ಲಿಗೆ ಹೋಗಬೇಕೆಂದಿದ್ದರೆ ನ್ಯಾಯಾಲಯವನ್ನು ಸಂಪರ್ಕಿಸಿ ಆದೇಶ ಪಡೆದುಕೊಳ್ಳಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News