ದಿಲ್ಲಿ ಜಗತ್ತಿನ ಅತಿ ವಾಯು ಮಾಲಿನ್ಯ ನಗರ

Update: 2019-11-15 18:24 GMT
PTI pic

ಹೊಸದಿಲ್ಲಿ, ನ. 15: ವಾಯು ಗುಣಮಟ್ಟ ಸೂಚ್ಯಾಂಕ 527 ದಾಖಲಾಗುವ ಮೂಲಕ ಶುಕ್ರವಾರ ಜಗತ್ತಿನ ಅತಿ ಹೆಚ್ಚು ಮಾಲಿನ್ಯದ ಪ್ರಮುಖ ನಗರವಾಗಿ ಹೊಸದಿಲ್ಲಿ ಹೊರಹೊಮ್ಮಿದೆ ಎಂದು ಜಾಗತಿಕ ವಾಯು ಗುಣಮಟ್ಟ ಸೂಚ್ಯಾಂಕದ ಆಧಾರದಲ್ಲಿ ಏರ್ ವಿಶುವಲ್‌ನ ದತ್ತಾಂಶ ಹೇಳಿದೆ.

ಏರ್ ವಿಶುವಲ್ ದತ್ತಾಂಶವನ್ನು ಆಗಾಗ ನವೀಕರಿಸುತ್ತದೆ. ಆದುದರಿಂದ ಶ್ರೇಯಾಂಕ ಹಾಗೂ ವಾಯು ಗುಣಮಟ್ಟ ಸೂಚ್ಯಾಂಕ ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ದಿಲ್ಲಿ ನವೆಂಬರ್ 5ರಂದು ವಾಯು ಮಾಲಿನ್ಯದ ಎಲ್ಲ ದಾಖಲೆಗಳನ್ನು ಮುರಿದಿತ್ತು. ಅನಂತರ ವಾಯು ಮಾಲಿನ್ಯ ನಿರಂತರ 9 ದಿನಗಳ ಕಾಲ ಅಪಾಯಕಾರಿ ಮಟ್ಟದಲ್ಲಿ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News