ಹೊತ್ತಿ ಉರಿದ 117 ವರ್ಷ ಹಳೆಯ ಚರ್ಚ್: ವೃದ್ಧ ದಂಪತಿ ಮೃತ್ಯು

Update: 2019-11-17 15:57 GMT
ಫೋಟೊ: ndtv.com

ಶಿಲ್ಲಾಂಗ್, ನ. 18: ಇಲ್ಲಿನ 117 ವರ್ಷ ಹಳೆಯ ಚರ್ಚ್‌ನಲ್ಲಿ ರವಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ವೃದ್ಧ ದಂಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ವಾಲಪಟ್ಟಿಯಲ್ಲಿರುವ ಚರ್ಚ್ ಆಫ್ ಗಾಡ್‌ನಲ್ಲಿ ರವಿವಾರ ಬೆಳಗ್ಗೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಬೆಂಕಿಯಿಂದಾಗಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಚರ್ಚ್‌ಗೆ ತೀವ್ರ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಿ. ಲಿಂಗ್ವಾ ತಿಳಿಸಿದ್ದಾರೆ. ಚರ್ಚ್‌ನ ತುಂಬಾ ಹತ್ತಿರದಲ್ಲಿದ್ದ ಮನೆಯಲ್ಲಿ ಅವರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಚರ್ಚ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಲಿಂಗ್ವಾ ತಿಳಿಸಿದ್ದಾರೆ.

 ಚರ್ಚ್ ಆಫ್ ಗಾಡ್ ಶಿಲ್ಲಾಂಗ್‌ನ 20 ಕಿ.ಮೀ. ದೂರದಲ್ಲಿರುವ ಮಿಲಿಯಮ್ ನಲ್ಲಿ 1902ರಲ್ಲಿ ನಿರ್ಮಾಣ ಮಾಡಲಾಗಿತ್ತು. ಈ ಚರ್ಚ್ ಅನ್ನು ಸ್ಥಳೀಯ ಕ್ರಿಶ್ಚಿಯನರು ನೋಡಿಕೊಳ್ಳುತ್ತಿದ್ದಾರೆ. ಈ ಪ್ರದೇಶದಲ್ಲಿರುವ ಪ್ರಮುಖ ಪ್ರೊಟೆಸ್ಟೆಂಟ್ ಚರ್ಚ್‌ಗಳಲ್ಲಿ ಇದು ಕೂಡ ಒಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News