ಸುಪ್ರೀಂ ಕೋರ್ಟ್‌ನ 2018ರ ಆದೇಶಕ್ಕೆ ‘ವಸ್ತುತಃ’ ತಡೆಯಿದೆ: ಕೇರಳದ ಸಚಿವ

Update: 2019-11-17 16:22 GMT

ತಿರುವನಂತಪುರ, ನ.17: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿದ್ದ ಸರ್ವೋಚ್ಚ ನ್ಯಾಯಾಲಯದ 2018,ಸೆ.28ರ ತೀರ್ಪಿಗೆ ‘ವಸ್ತುತಃ’ ತಡೆಯಿದೆ ಮತ್ತು ರಾಜ್ಯ ಸರಕಾರವು ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಮಾತ್ರ ಕಾರ್ಯಾಚರಿಸುತ್ತದೆ ಎಂದು ಕೇರಳದ ಕಾನೂನು ಸಚಿವ ಎ.ಕೆ.ಬಾಲನ್ ಅವರು ರವಿವಾರ ಇಲ್ಲಿ ತಿಳಿಸಿದರು.

 ಸರ್ವೋಚ್ಚ ನ್ಯಾಯಾಲಯದ 2018ರ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಸ್ತ್ರತ ಪೀಠಕ್ಕೊಪ್ಪಿಸಲು ನಿರ್ಧರಿಸಿ ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠವು ನ.14ರಂದು ಆದೇಶಿಸಿತ್ತು.

ಇಂತಹ ಸಂದರ್ಭದಲ್ಲಿ ಸಾಂವಿಧಾನಿಕ ಸರಕಾರವು ಕೇವಲ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತದೆ. ಈಗ ನಮಗೆ ಹೊಸ ಸಮಸ್ಯೆ ಎದುರಾಗಿದೆ. ನ.14ರ ತೀರ್ಪು ಹಿಂದಿನ ತೀರ್ಪಿಗೆ ತಡೆಯಾಜ್ಞೆಯಾಗಿ ದೆಯೇ ಎನ್ನುವುದು ಪ್ರಶ್ನೆಯಾಗಿದೆ. ಕಾನೂನು ಪ್ರಕಾರ ಯಾವುದೇ ತಡೆಯಾಜ್ಞೆಯನ್ನು ನೀಡಿಲ್ಲ,ಆದರೆ ವಸ್ತುತಃ ತಡೆಯಾಜ್ಞೆಯಿದೆ. ಅಧಿಕೃತವಾಗಿ ಉಲ್ಲೇಖಿಸಿಲ್ಲವದರೂ ವಾಸ್ತವದಲ್ಲಿ 2018ರ ಆದೇಶವನ್ನು ತಡೆಹಿಡಿಯಲಾಗಿದೆ ಎಂದು ಬಾಲನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News