ಐಸಿಸಿ ರ್ಯಾಂಕಿಂಗ್: ಶಮಿಗೆ ಅಗ್ರ 10 ರಲ್ಲಿ ಸ್ಥಾನ

Update: 2019-11-17 18:30 GMT

ಇಂದೋರ್, ನ.17: ಭಾರತವು ಬಾಂಗ್ಲಾ ವಿರುದ್ಧ ಇನಿಂಗ್ಸ್ ಮತ್ತು 130 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ,ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿರುವ ಆಟಗಾರರ ರ್ಯಾಂಕಿಂಗ್‌ನಲ್ಲೂ ಬದಲಾವಣೆಯಾಗಿದೆ.

ವೇಗಿ ಮುಹಮ್ಮದ್ ಶಮಿ ಮತ್ತು ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವೃತ್ತಿಜೀವನದ ಅತ್ಯುತ್ತಮ ಸ್ಥಾನಗಳಿಗೆ ಏರಿದ್ದಾರೆ. ಪಂದ್ಯದಲ್ಲಿ ಶಮಿ 58 ಕ್ಕೆ 7 ವಿಕೆಟ್ ಗಳಿಸಿ 790 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಐಸಿಸಿ ಟೆಸ್ಟ್ ಬೌಲರ್‌ಗಳ ಪೈಕಿ ಈಗ 7 ನೇ ಸ್ಥಾನಕ್ಕೆ ತಲುಪಿದ್ದಾರೆ.

ಭಾರತದ ವೇಗದ ಬೌಲರ್ ಕಪಿಲ್ ದೇವ್ (877) ಮತ್ತು ಜಸ್ಪ್ರೀತ್ ಬುಮ್ರಾ (832) ನಂತರ ಭಾರತದ ವೇಗದ ಆಟಗಾರ ಶಮಿ ಈ ಸಾಧನೆ ಮಾಡಿದ್ದಾರೆ. ಕಳೆದ ಟೆಸ್ಟ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಮಾಯಾಂಕ್ ಅಗರ್ವಾಲ್ 11ನೇ ಸ್ಥಾನಕ್ಕೆ ತಲುಪಿದ್ದಾರೆ

ಇದೇ ವೇಳೆ ಇಶಾಂತ್ ಶರ್ಮಾ ಅಗ್ರ 20 ರಲ್ಲಿ ಸ್ಥಾನ ಪಡೆದರು, ಮತ್ತು ರವಿಚಂದ್ರನ್ ಅಶ್ವಿನ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ ಆಲ್‌ರೌಂಡರ್ ಅಗರ್ ರ್ಯಾಂಕಿಂಗ್‌ಲ್ಲಿ ನಾಲ್ಕನೇ ಸ್ಥಾನಕ್ಕೆ ಸರಿದರು. ಬಾಂಗ್ಲಾದೇಶದ ಪರವಾಗಿ, ಮುಷ್ಫಿಕುರ್ರರಹೀಮ್ ಮತ್ತು ಲಿಟಾನ್ ದಾಸ್ ಮಾತ್ರ ಸ್ವಲ್ಪ ಹೊತ್ತು ದಾಳಿಯನ್ನು ಎದುರಿಸಿದರು.

ಬಾಂಗ್ಲಾದ ಬೌಲರ್ ಅಬು ಝಾಯಿದ್ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಯಶಸ್ಸು ಸಾಧಿಸಿದರು. ಬಾಂಗ್ಲಾ ವಿರುದ್ಧ ಭಾರತ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವುದರೊಂದಿಗೆ 300 ಪಾಯಿಂಟ್ ಗಳಿಸಿದ್ದು, ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ತಲಾ 60 ಅಂಕಗಳೊಂದಿಗೆ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ನಂತರದ ಸ್ಥಾನದಲ್ಲಿವೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಲಾ 56 ಅಂಕಗಳಲ್ಲಿವೆ. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಇನ್ನೂ ತಮ್ಮ ಖಾತೆಗಳನ್ನು ತೆರೆದಿಲ್ಲ. ಪಾಕಿಸ್ತಾನವು ಈ ವಾರದ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಡಬ್ಲ್ಯುಟಿಸಿಯ ಮೊದಲ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News