ಹಾಂಕಾಂಗ್‌ನಲ್ಲಿ ‘ಅಸಮರ್ಥನೀಯ ಬಲಪ್ರಯೋಗ’ಕ್ಕೆ ಅಮೆರಿಕ ಖಂಡನೆ

Update: 2019-11-18 15:02 GMT

ವಾಶಿಂಗ್ಟನ್, ನ. 18: ಹಾಂಕಾಂಗ್‌ನಲ್ಲಿ ‘ಅಸಮರ್ಥನೀಯ ಬಲಪ್ರಯೋಗ’ವನ್ನು ಅಮೆರಿಕ ಖಂಡಿಸಿದೆ ಹಾಗೂ ಹಾಂಕಾಂಗ್‌ನ ಸ್ವಾತಂತ್ರವನ್ನು ರಕ್ಷಿಸುವಂತೆ ಚೀನಾಕ್ಕೆ ಕರೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ರವಿವಾರ ಹೇಳಿದ್ದಾರೆ.

‘‘ಅಸಮರ್ಥನೀಯ ಬಲಪ್ರಯೋಗವನ್ನು ನಾವು ಖಂಡಿಸುತ್ತೇವೆ ಹಾಗೂ ಹಿಂಸೆಯನ್ನು ತೊರೆದು ರಚನಾತ್ಮಕ ಮಾತುಕತೆಯಲ್ಲಿ ತೊಡಗುವಂತೆ ನಾವು ಎಲ್ಲ ಪಕ್ಷಗಳನ್ನು ಒತ್ತಾಯಿಸುತ್ತೇವೆ’’ ಎಂದು ಅಧಿಕಾರಿ ನುಡಿದರು.

‘‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವಂತೆ, ಚೀನಾ-ಬ್ರಿಟನ್ ಜಂಟಿ ಘೋಷಣೆಯಡಿಯಲ್ಲಿನ ತನ್ನ ಬದ್ಧತೆಗಳನ್ನು ಚೀನಾ ಗೌರವಿಸಬೇಕು ಹಾಗೂ ಹಾಂಕಾಂಗ್‌ನ ಸ್ವಾತಂತ್ರ, ಕಾನೂನು ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ಜೀವನ ವಿಧಾನವನ್ನು ರಕ್ಷಿಸಬೇಕೆಂದು ಅಮೆರಿಕ ನಿರೀಕ್ಷಿಸುತ್ತದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News