ಮತ್ತೆ ಪ್ಯಾರಿಸ್‌ನ ಬೀದಿಗಿಳಿದ ‘ಹಳದಿ ಬನಿಯನ್’ಧಾರಿಗಳು

Update: 2019-11-18 16:57 GMT

ಪ್ಯಾರಿಸ್, ನ. 18: ಫ್ರಾನ್ಸ್‌ನ ‘ಹಳದಿ ಬನಿಯನ್’ ಹೋರಾಟಗಾರರು ಮತ್ತೆ ರವಿವಾರ ಮತ್ತೆ ಪ್ಯಾರಿಸ್‌ನ ಬೀದಿಗಿಳಿದಿದ್ದಾರೆ.

ಈ ಪ್ರತಿಭಟನಾ ಚಳವಳಿಯ ಪ್ರಥಮ ವಾರ್ಷಿಕ ದಿನದಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಘರ್ಷಣೆ ನಡೆದ ಒಂದು ದಿನದ ಬಳಿಕ, ಹಳದಿ ಬನಿಯನ್‌ಗಳನ್ನು ಧರಿಸಿದ ಪ್ರತಿಭಟನಕಾರರು ನಗರದ ಡಿಪಾರ್ಟ್‌ಮೆಂಟ್ ಸ್ಟೋರೊಂದಕ್ಕೆ ಮುತ್ತಿಗೆ ಹಾಕಿದರು.

ಡಝನ್‌ಗಟ್ಟಳೆ ಪ್ರತಿಭಟನಕಾರರು ಒಪೇರಾ ಶಾಪಿಂಗ್ ಜಿಲ್ಲೆಯಲ್ಲಿರುವ ಅಂಗಡಿಯ ಮೂರನೇ ಮಹಡಿಯಲ್ಲಿ ಬಂಡವಾಳಶಾಹಿ ವಿರೋಧಿ ಮತ್ತು ಸರಕಾರ ವಿರೋಧಿ ಘೋಷಣೆಗಳನ್ನು ಕೂಗಿದರು.

‘‘ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಫ್ರಾನ್ಸ್ ಮತ್ತು ನಿಮ್ಮ ಹಕ್ಕುಗಳನ್ನು ನಾಶಪಡಿಸುತ್ತಿದ್ದಾರೆ. ನಮ್ಮನ್ನು ಟೀಕಿಸಬೇಡಿ. ನಾವಿಲ್ಲಿ ನಿಮಗಾಗಿ ಇದ್ದೇವೆ’’ ಎಂಬುದಾಗಿ ಒಂದು ಘೋಷಪತ್ರದಲ್ಲಿ ಬರೆಯಲಾಗಿತ್ತು. ಬಳಿಕ ರಕ್ಷಣಾ ಸಿಬ್ಬಂದಿ ಅವರನ್ನು ಚದುರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News